Subscribe to our emails
Be the first to know about new collections and special offers.
ತ.ರಾ.ಸು. ಕಥೆ ಹೇಳುವುದರಲ್ಲಿ ನಿಸ್ಸಿಮರು. ಅವರ ಭಾಷೆಯ ಹರವು ವಿಶಾಲವಾದದ್ದು. ಚಿತ್ರಮಯವಾದ ವರ್ಣನೆ. ಅಂತಃಕರಣ ಉಕ್ಕಿಬರುವ ಸಂಭಾಷಣೆ, ರೋಮಾಂಚಕಾರಕ ಕಾರ್ಯಕಾರಣಪುರಸ್ಸರವಾದ ಘಟನೆಗಳ ಸಿಡಿಲಿನಂತಹ ಭಾವಗಳು, ಪಾರಿಜಾತ ನಿರೂಪಣೆ ಸ್ಪರ್ಶದಂತಹ ಮಾರ್ದವತೆ, ವೀರ್ಯವತ್ತಾದ ಭಾಷೆ, ಪರಿಣಾಮಕಾರಿಯಾದ ದೃಶ್ಯಗಳ ನಿರೂಪಣೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ४०. ಇವರ ದೃಶ್ಯ ವರ್ಣನೆಗಳನ್ನು ಓದುತ್ತಿದ್ದರೆ ನಾಟಕಶಾಲೆಯಲ್ಲಿ ಕುಳಿತು ದೃಶ್ಯ ವೀಕ್ಷಿಸುತ್ತಿದ್ದೇವೆಯೋ ಎನಿಸುತ್ತದೆ. ಒಬ್ಬರ ಧ್ವನಿಯ ಶಕ್ತಿಯು ಮೈ ಜುಮ್ಮೆನಿಸಿದರೆ, ಇನ್ನೊಬ್ಬರ ಮನದ ಮೆಲು ನಿಟ್ಟುಸಿರು ಕೇಳಿಸುತ್ತದೆ. ಮಗದೊಬ್ಬರ ಕಣ್ಣಂಚಿನಲ್ಲಿ ಅಂತಃಕರಣದ ಆಳದಿಂದ ಹೊರತುಳುಕುವ ಕಂಬನಿ ಕಾಣುತ್ತದೆ.
ಓದುಗರ ಸಂಪೂರ್ಣವಾಗಿ ಮನವನ್ನು ವಶಪಡಿಸಿಕೊಳ್ಳಬಲ್ಲ, ಅಂತಃಕರಣವನ್ನು ತಾಕಬಲ್ಲ ಮತ್ತೆ ಮತ್ತೆ ರೋಮಾಂಚನಗೊಳಿಸಬಲ್ಲ ಕಥೆಗಳನ್ನು ತ.ರಾ.ಸು. ತುಂಬ ಸಮರ್ಥವಾಗಿ ಹೇಳಿದ್ದಾರೆನ್ನುವುದಕ್ಕೆ ಇವರ ಅನೇಕ ಕಾದಂಬರಿಗಳು ಮತ್ತೆ ಮತ್ತೆ ಮುದ್ರಣಗೊಂಡು ಚಲನಚಿತ್ರವಾಗಿರುವುದೇ ಸಾಕ್ಷಿಯಾಗಿದೆ.
Be the first to know about new collections and special offers.