Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಉಳಿಸಿರೆಂದು ಕೇಳುವ ಹೊತ್ತು ಇದಲ್ಲ. ಹಾಗೆ ಉಳಿಯುವ ದರುದೂ ಬೇಕಿಲ್ಲ. ಹುಟ್ಟಿರದ ಬದುಕಿನ ತೆಪ್ಪ ತೇಲಿಸಬಹುದೇ ಹೊರತು, ಇಚ್ಛಿಸಿದೆಡೆ ಕೊಂಡೊಯ್ಯಲಾಗುವುದಿಲ್ಲ. ಎಡೆಯ ಮಾತು ಬಂದಿತಾಗಿ ಹೇಳುತ್ತೇನೆ, ಸದ್ಯದ ಸದ್ಯಕ್ಕೂ ಹೆಚ್ಚು ಸಾವಿರುವ ನೋವಿರುವ ಸ್ಥಳವಿದ್ದಲ್ಲಿ ಸುಳುಹು ವಿಳಾಸ ಕೊಟ್ಟುಬಿಡು. ಹೊರಡುವ ಮುನ್ನ ಈ ಎದೆಯೊಳಗೆಂದೋ ಮುಂದೆ ಕಿತ್ತು ಸುಡಲಿಕ್ಕಿರುವ ಪದ್ಯದ ಹಾಳೆಗಳನ್ನು ಇಟ್ಟುಬಿಡು. ಹಾಗೇ ಎಂದೂ ಬಳಸಿರದ ಬಳಸಲೊಲ್ಲದ ಅಳಲಿನ ಪದಗಳನ್ನೂ ಕಟ್ಟಿಕೊಡು.
ಜತನಿಸಿ ಅನುವಾಗುತ್ತೇನೆ.
ಇಷ್ಟಾಗಿ ಹೇಳು, ದಿನದಿನದ ಸುದ್ದಿಗೆ ಎಷ್ಟಂತ ಅತ್ತೀಯೆ? ಒರತೆ ತೀರಿಯೂ ಇನ್ನೆಷ್ಟು ಬತ್ತೀಯೆ? ಸಾವನುಭವಿಸದೆ ನೋವು ತೀರುವುದಿಲ್ಲ. ನೋವನುಭವಿಸದೆ ಸಾವು ಬರುವುದಿಲ್ಲ.
ಯಾವುದೇ ಮರ್ತ್ಯದ ಪರಿಯೇ ಹೀಗಂತೆ.
ಸಾಯಿಸಿ ಹುಟ್ಟಿಸಿ, ಹುಟ್ಟಿಸಿ ಸಾಯಿಸಿ, ಮರುಮರುಳಿ ಮರುಳುವ ಸುರುಸುರುಳಿಯ ಉರುಳದು. ಇರುವುದೇ ಆದರೆ ಇರುವಾಗಲೇ ಇರವು ಮರೆಯುವುದು ವಾಸಿ.
Be the first to know about new collections and special offers.