Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಮಹಾಭಾರತವೆಂದರೆ...
ಹಸ್ತಿನಾವತಿಯ ಅರಮನೆಯೊಂದರ ಕತೆ, ಸ್ವಯಂವರದ ಪಣ, ಋಷಿಗಳ ಯೋಗ, ರಾಜಸೂಯ ಯಾಗ, ಯಾರಿಗೋ ಬೀಳುವ ಶಾಪ, ಇಂದ್ರನ ಒಡ್ಡೋಲಗ, ದೇವತೆಗಳ ಅನುರಾಗ, ಮೇನೆಯಲ್ಲಿ ಹೋಗುವ ರಾಣಿ, ಮೇನಕೆಯ ಹೆಜ್ಜೆಯ ಕಿರುವಾಣಿ, ಕೃಷ್ಣನ ಸಮತ್ವ, ದ್ರೌಪದಿಯ ಛಲ, ಪಾಂಡವರ ಕುಲ, ಧೃತರಾಷ್ಟ್ರನ ಕುರುಡು, ಕರ್ಣನ ಬರಡು, ದಾಯಾದಿಗಳ ಭಾಗ, ಚಕ್ರವರ್ತಿಯ ರಾಯಬಾಗ, ಅವನ ಸಿಟ್ಟು, ಅವಳ ಸೇಡು, ಅವರ ಅಸೂಯೆ, ಇವರ ಚಿಂತೆ, ಅಷ್ಟು ದುಃಖ, ಇಷ್ಟು ಆಕ್ರೋಶ ಮತ್ತು ಮಹಾಯುದ್ಧ... ಎಲ್ಲರ ಶೋಕ ಮತ್ತು ಎಂದೂ ಅಳಿಯದ ಸೂತಕ...
ಮಹಾಭಾರತವೆಂದರೆ...
ಜನರ ಕತೆಗಳು
ಜನಪದದ ಕತೆಗಳು
ಜನಸ್ತೋಮದ ಕತೆಗಳು
ಮತ್ತು
ಜನರಿಂದಾಗಿ ಕತೆಗಳು
ಅಂತಹ ಗೊತ್ತಿರುವ ಕತೆಗಳ ಹಿಂದಿರುವ ಗೊತ್ತಿಲ್ಲದ ನೆಲೆಗಳನ್ನು ಹುಡುಕಿ ತರುವ ಪ್ರಯತ್ನ ಇಲ್ಲಿದೆ. ಇದು ಮಹಾಭಾರತವನ್ನು ಮತ್ತೊಮ್ಮೆ ಹೇಳುವ ಪುಸ್ತಕವಲ್ಲ; ಮಹಾಭಾರತವನ್ನು ಮತ್ತೊಮ್ಮೆ ನೋಡುವ ಪುಸ್ತಕ.
Be the first to know about new collections and special offers.