ಪುಟಾಣಿ ಮಕ್ಕಳಿಗೋಸ್ಕರ ಹೊಸ ಮ್ಯಾಗಜೀನ್!
ನಾಲ್ಕು ವರ್ಷಗಳ ಪುಸ್ತಕ ಮಾರಾಟ ಮತ್ತು ಪ್ರಕಾಶನದ 'ಅನುಭವ ಚಿಲಿಪಿಲಿಗೂಡು' ಎಂಬ ಮಕ್ಕಳ ಪತ್ರಿಕೆಯ ಕನಸನ್ನು ಹೆಪ್ಪುಗಟ್ಟಿಸಿತ್ತು. ಕನ್ನಡದ ಸಾಹಿತ್ಯದ ಭವಿಷ್ಯದ ಓದುಗರನ್ನು ಹುಟ್ಟುಹಾಕುವಲ್ಲಿ ಹಾಗೂ ಕನ್ನಡದ ಮಕ್ಕಳಿಗೆ ಓದಿನ ಸುಖವನ್ನು ಉಣಬಡಿಸುವಲ್ಲಿ ಚಿಲಿಪಿಲಿಗೂಡು ಒಂದು ಮೈಲಿಗಲ್ಲಾಗಲಿ ಎಂದು ನಾವು ಬಯಸುತ್ತೇವೆ. ಇದು ಮಕ್ಕಳ ಕಲಿಕೆ, ಕುತೂಹಲ ಹಾಗೂ ಕಲ್ಪನೆಯ ಪುಟ್ಟ ಜಗತ್ತು. ದೊಡ್ಡ ಕನಸಿನೊಂದಿಗೆ ಈ ಪುಟ್ಟ ಜಗತ್ತನ್ನು ಕಟ್ಟಲು ಹೊರಟಿದ್ದೇವೆ. ಈ ಚಿಲಿಪಿಲಿ ಕರುನಾಡಿನ ಮನೆಮಾತಾಗಲಿ ಎಂದು ಪ್ರೀತಿಯಿಂದ ನಮ್ಮನ್ನು ಹಾರೈಸಿ!
- ಹರಿವು ಬುಕ್ಸ್ ತಂಡ