Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
'ಶ್ರೇಷ್ಠತೆಯ ಸೊಕ್ಕು' ಎಂಬ ನನ್ನ ಈ ಕೃತಿಯು ವಿವಿಧ ಸಂದರ್ಭಗಳಲ್ಲಿ ನಾನು ಬರೆದ ಲೇಖನಗಳ ಸಂಕಲನ. ಇದೇ ಹೆಸರಿನ ಲೇಖನವೇ ಈ ಸಂಕಲನದಲ್ಲಿ ಮೊದಲನೆಯದು. ಶ್ರೇಷ್ಠತೆ ಎನ್ನುವುದು ಆದರ್ಶದ ಗುರಿಯತ್ತ ಸಾಗುವ ನಿರಂತರ ಶೋಧವೆಂದು ನಾನು ನಂಬಿದ್ದೇನೆ. ಹಾಗೆ ನೋಡಿದರೆ 'ಶ್ರೇಷ್ಠತೆ' ಎಂಬ ಹಂತವನ್ನು ನಿರ್ಧರಿಸುವ ಸಾಹಿತ್ಯಕ, ಸಾಂಸ್ಕೃತಿಕ ಮಾನದಂಡಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭವಲ್ಲ. ವಾಸ್ತವ ಹೀಗಿರುವಾಗ, ಶ್ರೇಷ್ಠತೆಯ ಹೆಸರಿನಲ್ಲಿ ಪ್ರತಿಭಾ ಭ್ರೂಣ ಹತ್ಯೆ ಮಾಡಬಾರದು. ಬರೆದರೆ ಶ್ರೇಷ್ಠವಾದದ್ದನ್ನೇ ಬರೆಯಬೇಕು ಎಂದು ಫರ್ಮಾನು ಹೊರಡಿಸುವುದು ಮತ್ತು ಅಂತಹ ಅಭಿಪ್ರಾಯದ ಒತ್ತಡವನ್ನು ನಿರ್ಮಾಣ ಮಾಡುವುದರ ಜೊತೆಗೆ ತಮ್ಮ ಮನೋಧರ್ಮದ ಮಾನದಂಡಗಳೇ ಅಂತಿಮವೆಂದೂ ಉಳಿದದ್ದೆಲ್ಲ ಕನಿಷ್ಠವೆಂದೂ ಬೀಗುವುದು ಒಂದು 'ಸೊಕ್ಕು' ಎಂದು ನನ್ನ ಅನಿಸಿಕೆ. ಸೃಜನಶೀಲತೆಯು ಯಾವತ್ತೂ ಸೊಕ್ಕಾಗಬಾರದು. ಸೃಜನಶೀಲತೆಯನ್ನು ನಿರ್ಧರಿಸುವ ಮಾನದಂಡಗಳೂ ಅಹಮ್ಮಿಕೆಯ ಸೊಕ್ಕಿನಿಂದ ಕೂಡಿರಬಾರದು. ವಿಶೇಷವಾಗಿ ನಮ್ಮ ಶ್ರೇಣೀಕೃತ ಸಮಾಜದಲ್ಲಿ ಅಸಂಖ್ಯಾತರ ಅಕ್ಷರಾಭಿವ್ಯಕ್ತಿಯೇ ಅಸಾಧ್ಯವಾಗಿದ್ದ ಇತಿಹಾಸವಿತ್ತೆಂಬುದನ್ನು ಮರೆಯಬಾರದು. ಅಕ್ಷರ ವಂಚಿತ ಸಮುದಾಯಗಳಿಗೆ ಬರೆಯು ವುದೇ ಒಂದು ಬಂಡಾಯ. ನಮ್ಮ ಸನ್ನಿವೇಶದಲ್ಲಿ 'ಶ್ರೇಷ್ಠತೆ'ಯ ಪರಿಕಲ್ಪನೆಗೆ ಸಾಂಸ್ಕೃತಿಕ ಆಯಾಮವಷ್ಟೇ ಅಲ್ಲದೆ, ಸಾಮಾಜಿಕ ಆಯಾಮವೂ ಇರುತ್ತದೆಯೆಂಬುದು ನನ್ನ ತಿಳುವಳಿಕೆ
Be the first to know about new collections and special offers.