Dr. S. S. Angadi
ಸರಳ ಶಬ್ದಮಣಿದರ್ಪಣ
ಸರಳ ಶಬ್ದಮಣಿದರ್ಪಣ
Publisher - ಕನ್ನಡ ವಿಶ್ವವಿದ್ಯಾಲಯ
- Free Shipping Above ₹400
- Cash on Delivery (COD) Available*
Pages - 350
Type - Paperback
Couldn't load pickup availability
ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ. ಹೀಗಾಗಿ ಏಕಕಾಲಕ್ಕೆ ಕನ್ನಡದ ಜಗತ್ತಿನ ಜ್ಞಾನವನ್ನು ವಿಶ್ವಕ್ಕೆ ನೀಡುವ ಮತ್ತು ವಿಶ್ವದ ಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಸ್ಥಾಯಿ ಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ಕಾರ್ಯ ಮಾಡುತ್ತಿದೆ.
ನಾಲ್ಕನೆಯ ಆವೃತ್ತಿಯಾಗಿ ಪ್ರಕಟಗೊಳ್ಳುತ್ತಿರುವುದು ಈ ಕೃತಿಯ ಮಹತ್ವವನ್ನು ತೋರಿಸುತ್ತದೆ. ವೈಯಾಕರಣಿ ಕೇಶಿರಾಜನ ಶಬ್ದಮಣಿದರ್ಪಣ ಭಾರತೀಯ ವ್ಯಾಕರಣಕ್ಷೇತ್ರದಲ್ಲಿಯೇ ಮಹತ್ವದ ಕೃತಿಯಾಗಿದೆ. ಶಬ್ದಮಣಿದರ್ಪಣ ಕನ್ನಡ ಭಾಷೆಗೆ ಸಮ್ಮಂದಿಸಿ ಅಧಿಕೃತ ವ್ಯಾಕರಣಗ್ರಂಥವಿದು. ಕೇಶಿರಾಜ ತನ್ನ ಹಿಂದಿನ ಎಲ್ಲಾ ವ್ಯಾಕರಣ ಗ್ರಂಥಗಳನ್ನು ಆಳವಾಗಿ ಅಧ್ಯಯನಕ್ಕೆ ಒಳಪಡಿಸಿ ಶಬ್ದಮಣಿದರ್ಪಣವನ್ನು ರಚಿಸಿರುವನು. ಇಲ್ಲಿಯವರೆಗೂ ವಿದ್ವಾಂಸರಿಂದ ಹೆಚ್ಚು ಹೆಚ್ಚು ಪರಿಷ್ಕರಣೆಗೆ ಮತ್ತು ವಿಮರ್ಶೆಗೆ ಒಳಗಾಗಿರುವ ಈ ಕೃತಿಯನ್ನು ಡಾ.ಎಸ್.ಎಸ್.ಅಂಗಡಿಯವರು ವಿದ್ಯಾರ್ಥಿ, ಅಧ್ಯಾಪಕರುಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಿರುವರು. ಶಬ್ದಮಣಿದರ್ಪಣದ ಸೂತ್ರಗಳನ್ನು ಅರ್ಥಕ್ಕನುಗುಣವಾಗಿ ವಿಂಗಡಿಸಿ, ಹೊಸಗನ್ನಡ ಆವೃತ್ತಿಯೊಂದನ್ನು ರಚಿಸಿದ ಡಾ.ಎಸ್.ಎಸ್.ಅಂಗಡಿಯವರು ಅಪರೂಪದ ವಿದ್ವಾಂಸರು. ಕನ್ನಡ ವಿಶ್ವವಿದ್ಯಾಲಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ.
-ಡಾ. ಮಲ್ಲಿಕಾ. ಎಸ್. ಘಂಟಿ
Sarala Shabdamanidarpana is a simplified and authoritative grammar text based on Keshiraja's classical Shabdamanidarpana, adapted for Kannada language studies. Authored by Dr. S. S. Angadi and published by Hampi University, this work presents grammatical principles in a structured, accessible format suitable for both students and scholars. The text organizes Shabdamanidarpana's sutras thematically, making complex linguistic concepts clearer for modern learners. Now in its fourth edition, this publication reflects the enduring significance of the original work in Indian grammatical tradition. Dr. Angadi's scholarly contribution bridges classical Sanskrit grammar with contemporary Kannada education, preserving linguistic heritage while serving academic needs. An essential reference for those studying Kannada grammar, linguistics, and the philosophical foundations of language structure.Share

Subscribe to our emails
Subscribe to our mailing list for insider news, product launches, and more.