Skip to product information
1 of 1

M. R. Kamala

ಕೆನ್ನೀಲಿ

ಕೆನ್ನೀಲಿ

ಪ್ರಕಾಶಕರು -

Regular price Rs. 220.00
Regular price Rs. 220.00 Sale price Rs. 220.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಇತಿಹಾಸವೇ ಇಲ್ಲದ, ಉಳಿದವರು ಬರೆದ ಇತಿಹಾಸದ ಭಾಗವಾದ ಸಮುದಾಯಗಳು ಎಚ್ಚರದ ಸ್ಥಿತಿಯಲ್ಲಿ ಬದುಕು ಕಟ್ಟಿಕೊಳ್ಳುತ್ತ, ಮುಂದಡಿ ಇಡಬೇಕಾದರೆ ಅವುಗಳಿಗೆ ಇರುವ ಒಂದೇ ಆಸರೆ ಮತ್ತು ಆಕರವೆಂದರೆ ನೆನಪು ಮತ್ತು ನೆನಪುಗಳು ಮಾತ್ರ ಈ ನೆನಪುಗಳಲ್ಲಿ ಪೂರ್ವಿಕರು ಬದುಕಿ ಬಾಳಿದ ಕಥೆಗಳು, ಕಡುಕಷ್ಟಗಳ ಸಹಿಸಲು ಅವರು ಕಂಡುಕೊಂಡ ಮತ್ತು ಅನುಸರಿಸಿದ ವಿಧಿವಿಧಾನಗಳು, ತುಟಿ ಬಿಗಿದು ಹಿಡಿದಿಟ್ಟ ದುಃಖದ ಗಾಥೆಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅವರ ದಿನನಿತ್ಯದ ಬದುಕಿನಲ್ಲಿ ಪ್ರತಿಫಲಿಸುವ ಅವರ ನಂಬಿಕೆ-ಆಚರಣೆಗಳು ಕಣಜದಂತೆ ಕೂಡಿಕೊಂಡಿವೆ.

ಶ್ರುತಿಯ ಈ ರಾಗ ಆಲಿಸಬೇಕೆಂದರೆ ನಮ್ಮ ಕಿವಿಗಳನ್ನು ನಾವು ಮೃದುವಾಗಿಸಿಕೊಳ್ಳಬೇಕು. ಪೂರ್ವಿಕರ ಕುರಿತು ನಮ್ಮ ನಿಲುವು ಕಠಿಣವಾಗಿದ್ದಾಗಲೂ ಅಂತಃಕರಣ ತುಂಬಿಕೊಂಡಿರಬೇಕು. ಅವರು ಮಾಡಿದ ತಪ್ಪುಗಳನ್ನು ನಾವೂ ಮಾಡುತ್ತ ದಾರಿ ತಪ್ಪಬಾರದೆಂದರೆ ಅವರು ಬದುಕಿದ ಕಾಲಮಾನದ ಅನಿವಾರ್ಯತೆಗಳನ್ನು ಅರಿಯಬೇಕು. ಆಗಲಷ್ಟೇ ಶ್ರುತಿ ಮತ್ತು ಕೃತಿಗಳೇನೆಂದು ನಾವು ತಿಳಿದುಕೊಳ್ಳಬಲ್ಲೆವು. 1983ರಲ್ಲಿ ಪ್ರಕಟವಾದ ವಿಶ್ವಮಾನ್ಯ ಲೇಖಕಿ ಅಲೀಸ್ ವಾಕರ್‌ 'ಇನ್‌ರ್ಚ್ ಆಫ್ ಅವರ್ ಮದರ್ ಗಾರ್ಡನ್ಸ್' ಕೃತಿ ಪ್ರಕಟವಾದಾಗ ಅದರಲ್ಲಡಗಿರುವ ಇಂತಹ ಒಳನೋಟ, ರೂಕ್ಷತೆ, ಸಾವಧಾನ, ತಪ್ಪೋಪ್ಪಿಗೆ, ಪೂರ್ವಿಕರ ಕುರಿತಿರುವ ಅಪಾರ ಪ್ರೀತಿಗಳನ್ನು ಕಂಡು ಲೋಕ ನಿಬ್ಬೆರಗಾಯಿತು.

ಸದ್ಯದ 'ಕೆನ್ನೀಲಿ' ಕೃತಿ ತಾಯಂದಿರ ತೋಟವನ್ನು, ಅದರೊಳಗೆ ಅಡಗಿದ ಹೂವು,
ಸುವಾಸನೆ, ಅರಳುವಾಗಿನ ಸಂಕಟ ಮತ್ತು ಹೂವರಳಿ ಘಮಿಸಿದಾಗ ಲೋಕಕೆ ನೀಡಿದ
ಸುವಾಸನೆಯನ್ನು ಹುಡುಕಿಕೊಂಡು ಹೋಗುತ್ತದೆ. ಇಲ್ಲಿ ಅಲೀಸ್ ವಾಕರ್ ಬರೆದ
ಪ್ರಬಂಧ, ಲೇಖನಗಳಿವೆ ಮಾಡಿದ ಭಾಷಣಗಳಿವೆ. ಆಫ್ರಿಕನ್-ಆಮೇರಿಕನ್ ಸಮಾಜ
ಒಂದು ಕಾಲಘಟ್ಟದಲ್ಲಿ ಕಟ್ಟಿಕೊಂಡ ಬದುಕಿನ ಸೂಕ್ಷ್ಮ ಸಾಂಸ್ಕೃತಿಕ ವಿವರಗಳಿವೆ.

ಭಾರತೀಯ ಸಮಾಜದ ರಚನೆಯೊಳಗೆ ಇಂಥ ಅನುರೂಪದ ಪುಸ್ತಕಗಳು ಎಷ್ಟು
ಸೇರಿಕೊಂಡರೂ ಸಾಲದು. ಸಾಮುದಾಯಿಕ ದರ್ಶನವನ್ನು ಕಟ್ಟಿಕೊಳ್ಳುವ ಬಗೆಯನ್ನು ಶೋಧಿಸುವ ಈ ಕೃತಿ, ಇಂದಿನ ತುರ್ತು ಓದುಗಳಲ್ಲೊಂದಾಗಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)