Dr. K. N. Ganeshaiah
ಚಿತಾದಂತ
ಚಿತಾದಂತ
Publisher - ಅಂಕಿತ ಪುಸ್ತಕ
- Free Shipping Above ₹350
- Cash on Delivery (COD) Available*
Pages - 248
Type - Paperback
Couldn't load pickup availability
ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಸ್ಥಾನ ಗಳಿಸಿಕೊಂಡಿರುವ ಡಾ। ಕೆ.ಎನ್. ಗಣೇಶಯ್ಯನವರು ಬರೆಯಲಾರಂಭಿಸಿದ್ದು ತೀರಾ ಈಚೆಗೆ. ಕಳೆದ 3 ವರ್ಷಗಳಲ್ಲಿ ನಾಲ್ಕು ಕಾದಂಬರಿ ಮತ್ತು ಮೂರು ಕಥಾ ಸಂಕಲನ ರಚಿಸಿದ್ದಾರೆ.
'ಚಿತಾದಂತ', ಇತಿಹಾಸದ ಎಳೆಯನ್ನು ಹಿಡಿದು ಬರೆದ ರೋಚಕ ಕಾದಂಬರಿ. ಕ್ರಿಸ್ತಪೂರ್ವದಿಂದ ಹಿಡಿದು ಆಧುನಿಕ ಕಾಲದವರೆಗೆ ಅದರ ವ್ಯಾಪ್ತಿ ಹರಡಿದೆ. ದಿಗ್ಬ್ರಮೆ ಉಂಟು ಮಾಡುವ ಈ ಕಥಾನಕಕ್ಕೆ ಪೂರಕವಾಗಿ ಅವರು ನೀಡುವ ಉಲ್ಲೇಖಗಳು, ನಕ್ಷೆಗಳು, ಚಿತ್ರಗಳು – ಇದು ನೈಜ ಕಥೆಯೇ ಎಂಬಂತೆ ಭಾಸವಾಗುತ್ತದೆ. ಈ ಮೂಲಕ ಗಣೇಶಯ್ಯನವರು ಇತಿಹಾಸವನ್ನು ಹೊಸ ದಿಕ್ಕಿನಲ್ಲಿ ನೋಡುವಂತೆ ಪ್ರೇರೇಪಿಸುತ್ತಾರೆ. ಅನೇಕ ಐತಿಹಾಸಿಕ ಮಿಥ್‌ಗಳನ್ನು ಒಡೆಯುವಲ್ಲಿ ಈ ಕಥಾನಕ ಯಶಸ್ವಿಯಾಗಿದೆ. ಕಥೆ ಮುಂದೇನು? ಮುಂದೇನು? ಎಂದು ಕುತೂಹಲ ಹುಟ್ಟಿಸುತ್ತದೆ. ಕಥಾವಸ್ತುವನ್ನು 'ಇದು ಹೀಗೇ' ಎಂದು ಓದುಗರು ಊಹಿಸಲು ಸಾಧ್ಯವೇ ಇಲ್ಲದಂತೆ ಗಣೇಶಯ್ಯ ನವರು ಕಾದಂಬರಿ ರಚಿಸಿದ್ದಾರೆ.
Share

ಚಿತಾದಂತ
Subscribe to our emails
Subscribe to our mailing list for insider news, product launches, and more.