Hindi : Udaya Prakash, Kannada : Prakash Garud
ವಾರೆನ್ ಹೇಸ್ಟಿಂಗ್ಸ್ನ ಹೋರಿ
ವಾರೆನ್ ಹೇಸ್ಟಿಂಗ್ಸ್ನ ಹೋರಿ
Publisher - ಅಂಕಿತ ಪುಸ್ತಕ
- Free Shipping Above ₹400
- Cash on Delivery (COD) Available*
Pages - 96
Type - Paperback
Couldn't load pickup availability
ಇದು, ಹಿಂದಿಯ ಧೀಮಂತ ಲೇಖಕ ಶ್ರೀ ಉದಯ ಪ್ರಕಾಶ್ರ 'ವಾರೆನ್ ಹೇಸ್ಟಿಂಗ್ಸ್ ಕಾ ಸಾಂಡ್' ಎಂಬ ಕಿರು ಕಾದಂಬರಿಯ ಭಾವಾನುವಾದ. ಈ ಸಮಾಜೋ- ಆರ್ಥಿಕ ರಾಜಕೀಯ ಕಟಕಿಯಲ್ಲಿ ವಾರೆನ್ ಹೇಸ್ಟಿಂಗ್ಸ್ ಮತ್ತು ಅವನ ಹೋರಿ ರೂಪಕಗಳಾಗಿ ಬಳಸಲ್ಪಟ್ಟಿವೆ.
ಉದಯ ಪ್ರಕಾಶರು ಒಂದು ವಿಲಕ್ಷಣ ಭ್ರಮೆ (Fantasy) ಯನ್ನು ಈ ಕಿರು ಕಾದಂಬರಿಯಲ್ಲಿ ಸೃಷ್ಟಿಸಿದ್ದಾರೆ. ಅದ್ಭುತಗಳ ನಾಡಾದ ಭಾರತವೆಂಬ ಕೂಟ ಪ್ರಶ್ನೆಯೊಂದಿಗೆ ವಾರೆನ್ ಹೇಸ್ಟಿಂಗ್ಸ್ನ ಒಡನಾಟ ಹಾಸ್ಯಾಸ್ಪದವೂ ಅಸಮಂಜಸವೂ ಆಗಿದೆ. ತನ್ನ ಸುತ್ತಲಿನ ಎಲ್ಲದರೊಂದಿಗೆ ಅವನ ನಡವಳಿಕೆ ಸಂವೇದನಾರಹಿತವಾಗಿದೆ; ಇದರಲ್ಲಿ ಆಳ ತಿಳುವಳಿಕೆ ಯಾಗಲೀ, ಒಳನಾಡಿ ಅರಿವಾಗಲೀ ಇಲ್ಲ, ಹಾಗಾಗಿ ಸತ್ವವೂ ಇಲ್ಲ.
'ವಾರೆನ್ ಹೇಸ್ಟಿಂಗ್ಸ್ನ ಹೋರಿ' ಇಂದು ನಮ್ಮ ಸುತ್ತ ನಡೆಯುತ್ತಿರುವ ಜಾಗತಿಕ ವಿದ್ಯಮಾನಗಳತ್ತ ನಮ್ಮನ್ನ ಕೊಂಡೊಯ್ಯುತ್ತದೆ. ಇಂದು ಭೋಗಲೋಲುಪತೆ ಮತ್ತು ಅಧಿಕಾರದಾಹ ವಿಕೃತಿಯ ರೂಪತಳೆದಿವೆ. ನಿರ್ಲಿಪ್ತತೆ- ಸಂವೇದನಾರಾಹಿತ್ಯಗಳ ನಡುವೆಯೂ ಕೆಲವು ಜೀವಿಗಳು, ಕೆಲವು ಚಳುವಳಿಗಳು ಹೋರಿಯ ಕೋಡು ಹಿಡಿದು ಮಣಿಸುವ, ಜಗತ್ತಿನ ಗಡ್ಡಹಿಡಿದು ಜಗ್ಗುವ ಧೈರ್ಯ ಹೊಂದಿವೆ. ವಿನಾಶದ ಅಂಚಿನಲ್ಲಿರುವ ತಳಿಯೊಂದಕ್ಕೆ ಕೊಟ್ಟ ಪ್ರಶಸ್ತಿಯಂತಿದೆ ಈ ಕಾದಂಬರಿ. ಡಾ. ಪ್ರಕಾಶ್ ಗರುಡರ ಭಾವಾನುವಾದ ಮೂಲದೊಂದಿಗೆ ಅನುಸಂಧಾನ ಮಾಡುತ್ತಲೇ ತಿಳಿಗನ್ನಡದಲ್ಲಿ ಚೊಕ್ಕವಾಗಿ ಹರಿದು ಬಂದಿದೆ.
-ಪ್ರೊ. ಎಚ್.ಆರ್. ಅಮರನಾಥ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.