L. P. Kulakarni
ವಿಜ್ಜಾನ ವೈಶಿಷ್ಟ್ಯ
ವಿಜ್ಜಾನ ವೈಶಿಷ್ಟ್ಯ
Publisher -
- Free Shipping Above ₹400
- Cash on Delivery (COD) Available*
Pages - 119
Type - Paperback
Couldn't load pickup availability
ಈಚಿನ ವರ್ಷಗಳಲ್ಲಿ ಗಮನಸೆಳೆಯುತ್ತಿರುವ ಕನ್ನಡ ವಿಜ್ಞಾನ ಲೇಖಕರಲ್ಲಿ ಶ್ರೀ ಎಲ್.ಪಿ. ಕುಲಕರ್ಣಿಯವರದ್ದು ಮಹತ್ವದ ಹೆಸರು. ವೃತ್ತಿಯಿಂದ ಶಿಕ್ಷಕರಾಗಿರುವ ಕುಲಕರ್ಣಿ- ಯವರು ತಮ್ಮ ವಿಜ್ಞಾನ ಸಂವಹನದ ಪ್ರವೃತ್ತಿಯಿಂದ ಕನ್ನಡದ ಓದುಗರಿಗೂ ವಿಜ್ಞಾನದ ರುಚಿ ಹತ್ತಿಸುತ್ತಿದ್ದಾರೆ.
ಸದ್ಯ ನಿಮ್ಮ ಕೈಯಲ್ಲಿರುವ ಈ ಕೃತಿ, ಕುಲಕರ್ಣಿಯವರು ವಿವಿಧ ವಿಷಯಗಳನ್ನು ಕುರಿತು ಬರೆದಿರುವ ಲೇಖನಗಳ ಸಂಕಲನ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಹೊಸ ಬೆಳವಣಿಗೆ- ಗಳನ್ನು ಪರಿಚಯಿಸುವುದರ ಜೊತೆಗೆ ಆಯಾ ಬೆಳವಣಿಗೆಗಳ ಹಿಂದಿನ ಪ್ರಾಥಮಿಕ ಪರಿಕಲ್ಪನೆಗಳ ಬಗೆಗೂ ಅವರು ಬರೆದಿದ್ದಾರೆ.
ಈ ಸಂಕಲನದಲ್ಲಿನ ಲೇಖನಗಳು ಮಾಲಿನ್ಯ ಪ್ಲಾಸ್ಟಿಕ್ ಪಿಡುಗು. ಡೋನ್ ತಂತ್ರಜ್ಞಾನ, ಹೊಸಬಗೆಯ ರೋಬಾಟ್ ಗಳು, ಜೀವಜಗತ್ತಿನ ಆಗುಹೋಗುಗಳು ಮುಂತಾದ ಹಲವು ಸಂಗತಿಗಳನ್ನು ಓದುಗರಿಗೆ ಪರಿಚಯಿಸಿವೆ. ನಮಗೆ ಪರಿಚಯವಿರುವ ಸಾಮಾನ್ಯ ವಸ್ತುಗಳಿಂದ ಪ್ರಾರಂಭಿಸಿ ಹಲವು ಸಂಕೀರ್ಣ ವಿಷಯಗಳನ್ನೂ ಸ್ಪರ್ಶಿಸಿವೆ.
ವೈವಿಧ್ಯಮಯ ವಿಷಯಗಳನ್ನು ಕುರಿತ ಈ ಲೇಖನಗಳು ಆಸಕ್ತಿದಾಯಕವಾಗಿರುವುದರ ಜೊತೆಗೆ ವಿಜ್ಞಾನದ ಮುನ್ನಡೆಯನ್ನೂ ದಾಖಲಿಸಿವೆ.ಕುಲಕರ್ಣಿಯವರು ತಮ್ಮಲೇಖನ- ಗಳಲ್ಲಿ ಹಲವೆಡೆ ಇಂಗ್ಲಿಷಿನ ಪದಗಳನ್ನೇ ನೇರವಾಗಿ ಬಳಸಿರುವುದು ಸಂವಹನದ ದೃಷ್ಟಿಯಿಂದಲೂ ಕುತೂಹಲ ಹುಟ್ಟಿಸುವ ಪ್ರಯತ್ನ.
ಕುಲಕರ್ಣಿಯವರ ಸಾಧನೆ ಹೀಗೆಯೇ ಮುಂದುವರೆಯಲಿ, ಕನ್ನಡದ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ಅವರು ಇನ್ನೂ ಹೆಚ್ಚಿನ ಕೊಡುಗೆ ನೀಡುವಂತಾಗಲಿ ಎನ್ನುವುದು ಅವರ ಓದುಗ- ರೆಲ್ಲರ ಹಾರೈಕೆ. ಹಾಗೆಯೇ, ಅವರ ಸಾಧನೆಯಿಂದ ಪ್ರೇರಿತರಾಗಿ ಇನ್ನೂ ಹಲವಾರು
ಶಿಕ್ಷಕರು ವಿಜ್ಞಾನ ಸಾಹಿತ್ಯದತ್ತ ಮುಖಮಾಡುವಂತಾಗಲಿ!
Share

Best sellers I like your efforts
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.