Subscribe to our emails
Be the first to know about new collections and special offers.
Dr. Premalatha B
Publisher - ಸಾವಣ್ಣ ಪ್ರಕಾಶನ
Type - Paperback
Pages - 200
Pickup available at Harivu Books New Shop
Usually ready in 24 hours
ವಿದೇಶ ಪ್ರಯಾಣ, ಕೈತುಂಬಾ ಕಾಂಚಾಣ' ಎನ್ನುವ ಈ ಲೆಕ್ಕಾಚಾರ ಸರಿಯೇ? ನಿಜಕ್ಕೂ ನಮಗೆ ಅಷ್ಟೊಂದು ಹಣ ಸಿಗುತ್ತದೆಯೇ? ನಡುವೆ ಕಳೆದು ಹೋಗುವ ಕಾಲದಲ್ಲಿ ಬದುಕಿಗೆ ಸಾರ್ಥಕತೆ ಸಿಗಬಲ್ಲದೇ? ಹಣದ ಹೊರತಾಗಿಯೂ ಝಣ-ಝಣವೆಂದು ಗಳಿಸುವುದೆಷ್ಟು? ಭರಪೂರ ಕಳೆದುಕೊಳ್ಳುವುದೆಷ್ಟು?
***
ಇಂಗ್ಲೆಂಡಿಗೆ ಬರಲು ಅತಿ ಬುದ್ಧಿವಂತಿಕೆಯೇನೂ ಬೇಕಿಲ್ಲ. ಪ್ರಯತ್ನ, ಅವಕಾಶ, ದುಡಿಯುವ ಛಾತಿ ಮತ್ತು ಬದ್ಧತೆಗಳದ್ದಿರೆ ಹೇರಳ ಅವಕಾಶಗಳಿವೆ.
***
ಸಾಂಸ್ಕೃತಿಕವಾಗಿ ಯು.ಕೆ. ಭಾರತಕ್ಕೆ ಹತ್ತಿರವಲ್ಲದದ್ದಿರೂ ಭಾರತವೇ ಅದರ ಹತ್ತಿರಕ್ಕೆ ಬಂದಿದೆ ಎಂದರೆ ತಪ್ಪಲ್ಲ. ಜಾಗತೀಕರಣದ ದಟ್ಟಪ್ರಭಾವದ ಕಾರಣ, ಇಂದಿನ ತಲೆಮಾರಿನ ಭಾರತೀಯರು ಇಂಗ್ಲೆಂಡಿನ ಬದುಕಿಗೆ ಅತಿಸುಲಭವಾಗಿ ಒಗ್ಗಿಕೊಳ್ಳಬಲ್ಲರು. ಮಿಕ್ಕವರು ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.
***
ಭಾರತಕ್ಕೆ ಬರುವ ವಿದೇಶೀ ಮಹಿಳೆಯೊಬ್ಬಳನ್ನು ಯಾರೋ ಒಬ್ಬ ಭಾರತೀಯ ರೇಪ್ ಮಾಡಿದನೆಂದ ಮಾತ್ರಕ್ಕೆ, ಭಾರತೀಯರೆಲ್ಲ ಹೇಗೆ ಅತ್ಯಾಚಾರಿಗಳಾಗುವುದಿಲ್ಲವೋ ಅಂತೆಯೇ ಪ್ರತಿ ದೇಶದಲ್ಲೂ ಬಹುತೇಕ ಒಳ್ಳೆಯ ಮತ್ತು ಕೆಲವು ಕೆಟ್ಟ ಜನರಿರುತ್ತಾರೆ. ಯು.ಕೆ.ಯೂ ಅದಕ್ಕೆ ಹೊರತಲ್ಲ.
***
ಕನ್ನಡಿಗರು ಎಂದ ಕೂಡಲೇ ಕನ್ನಡ ಸರಿಯಾಗಿ ಬರೆಯಲು ಬರದವರು ಇರುವ ಹಾಗೆಯೇ ಇಂಗ್ಲೀಷ್ ಚೆನ್ನಾಗಿ ಬರದ ಇಂಗ್ಲೀಷು ಜನರಿದ್ದಾರೆ. ಓದು-ಬರಹ ತಿಳಿದಿಲ್ಲದ ಜಿಪ್ಸಿ ಜನಾಂಗದವರೂ ಇದ್ದಾರೆ. ಬ್ರಿಟಿಷರಷ್ಟೇ ಶ್ರೇಷ್ಠ ಎನ್ನುವ ಆಲೋಚನೆಯ ಸಂಪ್ರದಾಯವಾದಿ ತೀವ್ರಗಾಮಿಗಳೂ ಇದ್ದಾರೆ. ವಲಸಿಗರ ಬಗ್ಗೆ ಇವರ ಮನಸ್ಸಿನಲ್ಲಿ ತಿರಸ್ಕಾರವಿದೆ. ಸಮಾಧಾನದ ವಿಚಾರವೆಂದರೆ, ಸಹಿಷ್ಣುತೆ ಇರುವ ಜನರ ಸಂಖ್ಯೆ ಇಡೀ ಯೂರೋಪಿನಲ್ಲಿಯೇ ಅಧಿಕವಾಗಿರುವುದು ಯುನೈಟೆಡ್ ಕಿಂಗ್ಡಮ್ಮಿನಲ್ಲಿ.
Be the first to know about new collections and special offers.