Title : Videsha Kaala, Travelogue, Author : Vishweshwar Bhat, Publisher : Vishwavani Pustaka.

ವಿದೇಶ ಕಾಲ

Rs. 500.00
Skip to product information
Title : Videsha Kaala, Travelogue, Author : Vishweshwar Bhat, Publisher : Vishwavani Pustaka.
ವಿದೇಶ ಕಾಲ
Vishweshwar Bhat
Publisher - ವಿಶ್ವವಾಣಿ ಪುಸ್ತಕ
Type - Hardcover
Pages - 496
- Free Shipping Above ₹400

- Cash on Delivery (COD) Available*
Rs. 500.00
Shipping calculated at checkout.

Pickup available at Harivu Books New Shop

Usually ready in 24 hours

View store information

ವಿದೇಶ ಕಾಲ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ನನ್ನ ವೃತ್ತಿ ಮತ್ತು ಪ್ರವೃತ್ತಿಗಳು ನೂರಕ್ಕೂ ಹೆಚ್ಚು ದೇಶಗಳಿಗೆ, ಮುನ್ನೂರ ಎಂಬತ್ತಕ್ಕೂ ಹೆಚ್ಚು ಸಲ ಹೋಗುವಂತೆ ಮಾಡಿದೆ. ಒಂದು ದೇಶಕ್ಕೆ ಒಂದೇ ಸಲ ಹೋಗಿದ್ದಿದ್ದರೆ, ಇಷ್ಟೊತ್ತಿಗೆ ನಾನು ಇಡೀ ಜಗತ್ತನ್ನು ಒಂದೂವರೆ ಸಲ ಸುತ್ತಿರುತ್ತಿದ್ದೆ, ಸಾಮಾನ್ಯವಾಗಿ ಯಾರೂ ಹೋಗದ ಸುಡಾನ್, ಬುರುಂಡಿ, ರವಾಂಡ, ಉಗಾಂಡದಂಥ ದೇಶಗಳಿಂದ ಹಿಡಿದು, ಉತ್ತರ ಧ್ರುವಕ್ಕೆ ಹತ್ತಿರವಿರುವ ಐಸ್ಲಂಡ್ ತನಕ ಹೋಗಿ ಬಂದಿದ್ದೇನೆ. ನೋಡಿದ ಪ್ರತಿ ದೇಶವೂ ನನಗೆ ಅಪರೂಪವಾಗಿ, ವಿಶಿಷ್ಟವಾಗಿ ಕಂಡಿದೆ. ಇಸ್ರೇಲ್ ನನ್ನನ್ನು ಹತ್ತು ಸಲ ಬರಮಾಡಿಕೊಂಡಿದೆ. ಇದೊಂದೇ ಕಾರಣಕ್ಕೆ ಸೌದಿ ಅರೇಬಿಯಾ ನನಗೆ ಹದಿನಾರು ವರ್ಷ ವೀಸಾ ಕೊಟ್ಟಿರಲಿಲ್ಲ. ಒಮಾನಿನ ಭಯಾನಕ ಮರುಭೂಮಿಯಲ್ಲಿ ಸಾವಿರಾರು ಮೈಲು ಪ್ರಯಾಣ ಮಾಡಿ, ನಂತರ ಯೆಮನ್ ಗಡಿ ತನಕ ಗೊತ್ತಿಲ್ಲದೇ ಹೋಗಿದ್ದೆ. ವಾಪಸ್ ಬಂದಿದ್ದೇ ಪುಣ್ಯ. ಉಗಾಂಡ, ಕಾಂಗೋ ಮತ್ತು ರವಾಂಡದ ಗಡಿ ಸಂದಿಸುವ ವಿರುಂಗಾ ಅರಣ್ಯ ಪ್ರದೇಶದಲ್ಲಿ ಮೌಂಟನ್ ಗೊರಿಲ್ಲಾಗಳನ್ನು ಹಿಂಬಾಲಿಸಿ ಹೋಗಿದ್ದೆ. ಹತ್ತಾರು ಸಾವಿರ ಕಡಲಾಮೆಗಳು ಒಂದೆಡೆ ಮೊಟ್ಟೆ ಇಡುವುದನ್ನು ನೋಡಲೆಂದು ಮಸ್ಕತ್ ನ ಸುರ್ ಗೆ ಹೋಗಿದ್ದೆ. ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಜತೆ ಹದಿನಾಲ್ಕು ದಿನಗಳ ಕಾಲ ನಾಲ್ಕು ದೇಶಗಳನ್ನು ಸುತ್ತಿ ಬಂದಿದ್ದೇನೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ಬಹುತೇಕ ರಾಷ್ಟ್ರಪತಿ, ಪ್ರಧಾನಿ, ವಿದೇಶಾಂಗ ಸಚಿವರ ಜತೆ ಇಪ್ಪತ್ತಕ್ಕೂ ಹೆಚ್ಚು ದೇಶಗಳಿಗೆ ಹೋಗಿದ್ದೇನೆ. ಇಂಥ ನಾಯಕರು ಭಾಗವಹಿಸುವ ಎಲ್ಲ ಅಂತಾರಾಷ್ಟ್ರೀಯ ಶೃಂಗ ಮತ್ತು ಸಮಾವೇಶಗಳನ್ನು ವರದಿ ಮಾಡಿದ್ದೇನೆ. ಎಷ್ಟೇ ದೇಶ ಸುತ್ತಿದರೂ ನೆರೆಯ ಪಾಕಿಸ್ತಾನಕ್ಕೆ ಹೋಗಿ ಬರುವುದು ಅಷ್ಟು ಸುಲಭವಲ್ಲ. ಅಲ್ಲಿಗೂ ಎರಡು ಸಲ ಹೋಗಿದ್ದೆ. ಲಂಡನ್ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಯುರೋಪಿನ ಬಹುತೇಕ ದೇಶಗಳನ್ನು ನೋಡುವ ಅವಕಾಶ ಒದಗಿ ಬಂದಿತ್ತು. ಲಕ್ಷಾಂತರ ಪ್ರಾಣಿಗಳು ಗುಳೆ (ಗ್ರೇಟ್ ಮೈಗ್ರೇಶನ್) ಹೋಗುವುದನ್ನು ನೋಡಲೆಂದೇ ಕೀನ್ಯಾದ ಮಸೈ ಮರಾಕ್ಕೆ ಹೋಗಿದ್ದೆ. ಉಷ್ಟ್ರಪಕ್ಷಿಗಳ ರೇಸ್ ನೋಡಲು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಕರೆದಿತ್ತು. ಬೆಂಗಳೂರಿನಿಂದ ಸಿಂಗಾಪುರಕ್ಕೆ ಹೋದರೂ, ಹೊರಗೆ ಹೋಗದೇ, ಅಲ್ಲಿನ ಚಾಂಗಿ ಏರ್ ಪೋರ್ಟಿನಲ್ಲಿ ಮೂರು ದಿನ ಉಳಿದು ಬಂದಿದ್ದೆ. ಸೌದಿ ಅರೇಬಿಯಾದ 'ಎಂಡ್ ಆಫ್ ದಿ ವರ್ಲ್ಡ್' ಎಂಬ ತಾಣವನ್ನು ನೋಡಲು ಹೋಗಿ ದಾರಿ ತಪ್ಪಿಸಿಕೊಂಡು ಕಣ್ಮರೆಯಾಗುವುದರಿಂದ ಸ್ವಲ್ಪದರಲ್ಲಿ ಬಚಾವ್ ಆಗಿದ್ದೆ. ಪ್ಲೊವೇಕಿಯ, ಆಸ್ಟ್ರಿಯಾ ಮತ್ತು ಹಂಗೇರಿ - ಈ ಮೂರೂ ದೇಶಗಳ ಗಡಿ ಸಂದಿಸುವೆಡೆ ಇಟ್ಟ ಒಂದೇ ಟೇಬಲ್ ನಲ್ಲಿ ಕಾಫಿ ಕುಡಿದು ಪುಳಕಗೊಂಡಿದ್ದೇನೆ. ಸೀಕೆಲ್ಸ್, ಕೊಸುಮ್ಮೆ, ಕೊಟಕಿನಬಾಲು, ಇಬಿಜ್ಜಾದಂಥ ನಯನಮನೋಹರ ದ್ವೀಪ, ಕೊಪಕಬಾನ, ಸ್ನಯ ಡಿ ಮುರೊ, ಬನಾನದಂಥ ಬೀಚುಗಳಲ್ಲಿ ವಿಹರಿಸಿದ್ದೇನೆ. ಮೃತ ಸಮುದ್ರ (ಜೆಡ್ ಸೀ) ದಲ್ಲಿ ತೇಲುತ್ತಾ ಪತ್ರಿಕೆ, ಪುಸ್ತಕ ಓದಿದ್ದೇನೆ. ಬರ್ನಾರ್ಡ್ ಶಾ ಹೇಳಿದಂತೆ I dislike feeling at home when I am abroad! ಒಂದು ವರ್ಷವಂತೂ ನೂರಾ ತೊಂಬತ್ತೆರಡು ದಿನ ವಿದೇಶದಲ್ಲೇ ಕಳೆದಿದ್ದೆ! ಈ ಪುಸ್ತಕ ಆ ಎಲ್ಲ ಸ್ವಾರಸ್ಯಕರ ಕಥನಗಳನ್ನು ಒಳಗೊಂಡಿದೆ. ನಾನು ಇಲ್ಲಿ ಹೇಳಿದ್ದಕ್ಕಿಂತ ಪುಸ್ತಕದಲ್ಲಿ ಹೇಳಿರುವುದೇ ಹೆಚ್ಚು!

- ವಿಶ್ವೇಶ್ವರ ಭಟ್ 

You may also like

Subscribe to our emails

Be the first to know about new collections and special offers.