Skip to product information
1 of 2

Vasamurthy, To Kannada: M.R Guruprasad

ತುಂಟ ಗೋಪಿಯ ಅದ್ಬುತ ಯಾತ್ರೆ

ತುಂಟ ಗೋಪಿಯ ಅದ್ಬುತ ಯಾತ್ರೆ

Publisher -

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 64

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಪುಟ್ಟ ಬಾಲಕ ಗೋಪಿ ಲೋಕಾನುಭವ ಪಡೆದು ಪಕ್ವವಾಗುವ ಕಥೆಯನ್ನು ಈ ಪುಸ್ತಕ ಹೇಳುತ್ತದೆ.

ತನ್ನ ವಯಸ್ಸಿಗೆ ಸಹಜ ಕುತೂಹಲ, ಬೆರಗು, ಅಚ್ಚರಿಗಳನ್ನು ತುಂಬಿಕೊಂಡ ಗೋಪಿ ಪುಟ್ಟ ಚಿಟ್ಟೆಯ ಸಹಾಯದಿಂದ ಮನೆಯಿಂದ ಆಚೆಯ ಹೊರಲೋಕದ ವಿಸ್ಮಯಕರ ಅನುಭವಗಳನ್ನು ಪಡೆಯುತ್ತಾನೆ.

ರಕ್ತ ಹೀರುವ ಕೀಟಗಳು, ಹೂವಿನ ಸುವಾಸನೆ, ಜೇನಿನ ಸಿಹಿ, ಉಪದ್ರವಿಯಾದ ಮನುಷ್ಯ, ಅದ್ಭುತಗಳಿಂದ ಕೂಡಿದ ಪ್ರಾಣಿ ಮತ್ತು ಸಸ್ಯ ಪ್ರಪಂಚವನ್ನು ಗೋಪಿ ಈ ಪಯಣದಲ್ಲಿ ಎದುರುಗೊಳ್ಳುತ್ತಾನೆ.

ರಮ್ಯ ಕಲ್ಪನೆ, ಸರಳ ಮತ್ತು ಸುಂದರ ಭಾಷೆ, ಮನಸ್ಸನ್ನು ಉಲ್ಲಾಸಗೊಳಿಸುವ ಪುಟ್ಟ ಬಾಲಕನ ಅನುಭವ ಓದುಗರಿಗೆ ಮುದವನ್ನು ನೀಡುತ್ತವೆ.

ಕೇಶವ ಮಳಗಿ

ಸರಳವಾಗಿ ಬರೆಯುವುದು ಒಂದು ಸಿದ್ಧಿ:

ಅದರಲ್ಲಿಯೂ ಮಕ್ಕಳಿಗೆ ತಾಕುವಂತೆ ಬರೆಯುವುದು

ಮತ್ತೊಂದು ಮಜಲಿನ ಸಿದ್ದಿ: ಇದು ಗುರುಪ್ರಸಾದರಿಗೆ ಒಲಿದಿದೆ. ಕಾಲ್ಪನಿಕತೆ, ವಿನೋದದ ಜೊತೆಗೆ ಜಗತ್ತನ್ನು ಭಿನ್ನ ನೆಲೆಗಳಲ್ಲಿ ನಿಂತು ನೋಡುವ ಅಗತ್ಯವನ್ನು ಪ್ರತಿಪಾದಿಸುವ ಅವರ ಕಥಾಶೈಲಿ ಮಕ್ಕಳಿಗೆ ಮನರಂಜನೆಯ ಜೊತೆಗೆ ಮನೋವಿಕಾಸಕ್ಕೂ ಜೊತೆಯಾಗುತ್ತದೆ.

ಸಿ. ಎಸ್. ಮಹೇಶ್ ಕುಮಾರ್

View full details