Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
'ಮಹಿಳೆಯರಿಗೆ ಚರಿತ್ರೆಯೇ ಇಲ್ಲ, ಇದ್ದರೂ ಅದು ಕಳೆದುಹೋಗಿದೆ' ಎಂದು ಮೊದಲು ಗುರುತಿಸಿ ಮಾತನಾಡಿದವಳು ಸಿಮೊನ್ ದ ಬುವಾ. ಗಂಡಿನಿಂದ ಏಕಮುಖವಾಗಿ ಕಟ್ಟಲ್ಪಟ್ಟ ಚರಿತ್ರೆಯಲ್ಲಿ ತಾನು ಅವನ ಸಹಾಯಕಳು ಮಾತ್ರ ಎಂಬ ಅರಿವೇ ಸ್ವಂತಿಕೆಯುಳ್ಳ ಹೆಣ್ಣಿಗೆ ಆಘಾತ ತರುವಂತದ್ದಾಗಿದೆ. ತನ್ನ ಮೊಲೆ, ಮುಡಿ. ಗರ್ಭಾಶಯಗಳೇ ಕಾರಣವಾಗಿ ಕೇವಲ ಲೈಂಗಿಕ ಹಾಗೂ ತಾಯ್ತನದ ಕಾರಣಗಳಗೆ ಮಾತ್ರ ತಾನು ಬಳಕೆಯಾಗುತ್ತಿರುವುದು ಅವಳಿಗೆ ಯಾತನೆಯನ್ನು ಉಂಟುಮಾಡುತ್ತದೆ. ವಿವಾಹವೆನ್ನುವುದು ಹೆಣ್ಣಿನ ಅನಿವಾರ್ಯವಾದ ಜವಾಬ್ದಾರಿ ಎಂಬ ರೂಢಿಗತ ನಂಬಿಕೆಯೂ ಸಹ ಉಸಿರುಕಟ್ಟಿಸುವಂತದ್ದು. ಹೆಣ್ಣು ಹೆಣ್ಣಾಗಿಯೇ ಇರಬೇಕೆಂದು ಹುಟ್ಟಿರುವುದಿಲ್ಲ, ಹೆಣ್ಣಾಗಿ ರೂಪಿಸಲ್ಪಡುತ್ತಾಳೆ ಎಂಬ ಮಾತೇ ಹೆಣ್ಣ ಚರಿತ್ರೆಯನ್ನು ರೂಪಿಸಿತು. ಹೆಣ್ಣು ಕುರಿತಾದ ಮಿಥ್ಯ. ತಪ್ಪುಗ್ರಹಿಕೆಗಳನ್ನು ತನ್ನ ಬದುಕು ಮತ್ತು ಸುತ್ತಲಿನ ವಾಸ್ತವ ಜಗತ್ತಿನ ಮೂಲಕ ಸ್ಫೋಟಿಸ ಹೊರಟ ಬುವಾಳ ಪ್ರಯತ್ನ ಬಹು ದೊಡ್ಡದು. ಪ್ರಸಿದ್ಧ ಲೇಖಕರ, ಲೇಖಕಿಯರ ನಡುವೆ ಜೀವಿಸುತ್ತಾ, ತನ್ನ ಸುತ್ತಲೂ ಇದ್ದ ವಿವಾದಗಳ ನಡುವೆ ತನ್ನನ್ನು ಕುರಿತು ಬರೆಯಲು ಹೊರಟವಳು ಈಕೆ. ಆದರೆ ಆಕೆ ಗ್ರಹಿಸಿದ್ದು ಜೈವಿಕ, ಆರ್ಥಿಕ, ಚಾರಿತ್ರಿಕ ಹಾಗೂ ಸಾಮಾಜಿಕವಾಗಿ ಹೆಣ್ಣನ್ನು ಹೇಗೆ ಕಾಣಲಾಗಿದೆ ಎಂಬ ಸತ್ಯವನ್ನು. ಪುರುಷನ ಜಗತ್ತಿನಲ್ಲಿದ್ದೂ ತನ್ನ ಚರಿತ್ರೆ ಕಟ್ಟುವುದು ಮಹಿಳೆಗೆ ಸವಾಲಿನ ಕೆಲಸ. ಇಂತಹ ಸ್ತ್ರೀವಾದಿಗಳ ಪ್ರಯತ್ನದಿಂದಲೇ ನೋರಾಳಂತಹ ಹೆಣ್ಣುಮಕ್ಕಳು ತಾವೇ ಕಟ್ಟಿಕೊಂಡ ಡಾಲ್ಸ್ ಹೌಸ್ನಿಂದ ಸಾಧ್ಯವಾಗುತ್ತದೆ. ಹೊರಬರಲು
-ಎಚ್ ಎಲ್ ಪುಷ್ಪ
Be the first to know about new collections and special offers.