ಕರ್ನಾಟಕದ ರೈತರ ತಂಡವೊಂದು ಥಾಯ್ಲೆಂಡಿನ ಕೃಷಿಕರ ಸಾಹಸಗಳನ್ನು ನೋಡಿಬರಲೆಂದು ಹೋಗುತ್ತದೆ. ಪ್ರವಾಸದ ಮೋಜನ್ನು ಅನುಭವಿಸುತ್ತಲೇ ಏನೇನನ್ನು ನೋಡಿ, ಏನೆಲ್ಲವನ್ನು ಕಲಿತರು ಎಂಬುದರ ಚಂದದ ವಿವರಗಳು ಈ ಪುಸ್ತಕದಲ್ಲಿವೆ. ಕಲಿತದ್ದು ಏನೆಂದರೆ:
ಫಸಲನ್ನು ಬೆಳೆದರಷ್ಟೇ ಸಾಲದು, ಮಾರುಕಟ್ಟೆಯನ್ನೂ ಸೃಷ್ಟಿಸಿಕೊಳ್ಳಬೇಕು. ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡರೆ ಸಾಲದು, ಗಿರಾಕಿಗಳನ್ನೂ ಸೆಳೆಯಬೇಕು. ಗಿರಾಕಿಗಳನ್ನು ಸೆಳೆದರೆ ಸಾಲದು, ಅವರು ನಿಮ್ಮ ಮಾಲನ್ನು ಕೊಳ್ಳುವಂತೆ ಮಾಡಬೇಕು. ಕೊಂಡು ಹೋದರೆ ಸಾಲದು, ಮತ್ತೆ ಅವರು ನಿಮ್ಮನ್ನು ಹುಡುಕಿಕೊಂಡು ಬರುವಂತೆ ಮಾಡಬೇಕು.
ಕೃಷಿ ವಿಸ್ತರಣೆಯ ನಿಜವಾದ ಅರ್ಥ ಈ ಪುಸ್ತಕದಲ್ಲಿದೆ. ಅಷ್ಟೇ ಅಲ್ಲ, ಕೃಷಿಯನ್ನು ಪ್ರವಾಸೋದ್ಯಮವನ್ನಾಗಿ ಮಾಡುವ ತಂತ್ರಗಳೂ ಇಲ್ಲಿವೆ. ಎಲ್ಲವೂ ಸೊಗಸಿನ ಲವಲವಿಕೆಯ ಮಾತುಗಳಲ್ಲಿವೆ.