Skip to product information
1 of 2

To Kannada : Sunaif

ತಾಜ್ ಮಹಲ್ಲಿನ ಖೈದಿಗಳು

ತಾಜ್ ಮಹಲ್ಲಿನ ಖೈದಿಗಳು

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 190

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

'ಈ ತಲೆಯೊಳಗೆ ಮೆದುಳು ಅಂತ ಒಂದು ಇಲ್ಲದಿದ್ದರೆ ಕಾಣಬಹುದಿತ್ತು. ನೋಡು, ಪ್ರಪಂಚದ ಯಾವ ಮೂಲೆಯಲ್ಲಿ ನನ್ನ ಪರಿಪೂರ್ಣ ಪಾಲಿಲ್ಲದೆ ಪ್ರಗತಿಯಾಗಿದೆ ಹೇಳು.' ನಾನು ಅದನ್ನು ತಮಾಷೆಯಾಗಿ ಹೇಳಿದ್ದೆನಾದರೂ ದೇಹಕ್ಕೆ ಆ ಮಾತನ್ನು ಜೀರ್ಣಿಸಲಾಗಲಿಲ್ಲ. ಅರೆಗಳಿಗೆಯ ಮೌನದ ನಂತರ ದೇಹ ಮಾತಾಡಿತು.

“ನೀನು ಕಡಿದು ಗುಡ್ಡೆ ಹಾಕಿದ್ದು ಅಷ್ಟರಲ್ಲೇ ಇದೆ. ಪ್ರಗತಿ ಅಂತ ಹೇಳುತ್ತಾ ಒಬ್ಬನೇ ದೊಡ್ಡ ಬುದ್ದಿಜೀವಿಯಾಗಿ ಎಲ್ಲವನ್ನು ಮುಕ್ಕುವ ಆಲೋಚನೆ ನಿನಗಿತ್ತಲ್ಲ. ನೋಡು, ಶ್ರಮದ ಬೆವರಿಲ್ಲದೆ ಈ ಭೂಮಿಯಲ್ಲಿ ಏನೇನೂ ಇಲ್ಲ.'

ನಾನೂ ಬಿಟ್ಟುಕೊಡಲಿಲ್ಲ:

'ಅದಕ್ಕೆ ಸಾಕ್ಷಿ ಎಲ್ಲಿದೆ? ಯಾವ ಇತಿಹಾಸ ಪುಸ್ತಕದಲ್ಲಿ ನಿನ್ನ ಹೆಸರಿದೆ? ಯಾವ ಶಾಸನದಲ್ಲಿದೆ? ಪಾಠಪುಸ್ತಕಗಳಲ್ಲೂ ಇಲ್ಲ. ತಲೆ, ತಲೆ ಮಾತ್ರ ಅತ್ಯಂತಿಕ ಸತ್ಯ. ಮಹಾಪುರಷರ ದೇಹವನ್ನು ನೀನು ತೋರಿಸಿ ಕೊಡು ನೋಡೋಣ. ನಾಣ್ಯಗಳನ್ನು ನೋಡು. ಅದರಲ್ಲಿ ರಾಜನ ದೇಹ ಎಲ್ಲಿದೆ?'

ದೇಹದ ಕೋಪ ನೆತ್ತಿಗೇರಲು ಇಷ್ಟು ಸಾಕಿತ್ತು. ದೇಹ ಹೇಳಿತು:

'ನೀನು ಚರಿತ್ರೆಯ ಕುರುಡರಿಗೆ ಮುಟ್ಟಿನೋಡಲು ಬಾಕಿಯಿರುವ ಚಿಹ್ನೆ ಮಾತ್ರ.

ಕಿಲುಬುಗಟ್ಟುವ ಅಲೆಕ್ಸಾಂಡರ್ ಚಕ್ರವರ್ತಿ. ಆದರೆ, ನಾನು ಕೋಟೆಗಳ ಮೇಲೆ, ಅಣೆಕಟ್ಟೆಗಳ ಮೇಲೆ ಎದೆಯುಬ್ಬಿಸಿ ನಿಂತಿರುತ್ತೇನೆ.'

ಆ ದಿನದ ಮಾತುಕತೆ ಅದೆಷ್ಟು ಬೇಗ ತಮಾಶೆಯಿಂದ ಗಂಭೀರತೆಯ ಕಡೆಗೆ ವಾಲಿತ್ತು.

-'ತಲೆ' ಕಥೆಯಿಂದ 

View full details

Talk about your brand

Share information about your brand with your customers. Describe a product, make announcements, or welcome customers to your store.