Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಡಾ. ಅಶೋಕ ನರೋಡೆಯವರ 'ಸ್ತ್ರೀಯೆಂದರೆ ಅಷ್ಟೇ ಅಲ್ಲ...' ಸಹೃದಯರ ಗಮನ ಸೆಳೆದ ಕೃತಿ. 'ಸ್ತ್ರೀವಾದ'ದ ಪರಿಕಲ್ಪನೆಯೇ ಪ್ರಮುಖ ವಿಷಯವಸ್ತು ಬಹುತ್ವ ಸಂಸ್ಕೃತಿಯ ಭಾರತದಲ್ಲಿ ಸ್ತ್ರೀವಾದ ಚರ್ಚಿತಗೊಳ್ಳುತ್ತಿದೆ. 'ಸ್ತ್ರೀವಾದ'ವನ್ನು ಅಭಿವ್ಯಕ್ತಗೊಳಿಸಿ ಮಹಿಳೆಯರ ಮುನ್ನಡೆಗೆ ಮುನ್ನುಡಿ ಬರೆದ ರಚನೆಯಿದು. ಪರಂಪರೆ, ವ್ಯವಸ್ಥೆ ಸ್ಥಾಪಿತ ಮೌಲ್ಯಗಳಲ್ಲಿ ಮಹಿಳೆ ಮಾಯವಾಗಿದ್ದಾಳೆ. ಅವಳ ವ್ಯಕ್ತಿತ್ವವು ಗೋಚರಿಸದೇ ಗೌಣವಾಗಿದೆ. ಲಿಂಗಭೇದ ಸಾಮಾಜಿಕ ಪಿಡುಗು ಆಗಿ ಸೀ ಆಶಯಗಳು ಈಡೇರುತ್ತಿಲ್ಲ. ಪ್ರಾಚೀನ ಕಾಲದಲ್ಲಿ ಸ್ತ್ರೀಗೆ ಸಹಬಾಳ್ವೆ ಸಾಧ್ಯವಾಗಿದ್ದು ಕ್ರಮೇಣ ಕೌಟುಂಬಿಕ ಪರಿಧಿಗೆ ಅವಳು ಸೀಮಿತವಾಗುವಂತಾಯಿತು. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ, ರಾಜನೈತಿಕ ರಂಗಗಳಿಂದ ದೂರವುಳಿದು ನಿರ್ಲಕ್ಷಕ್ಕೊಳಗಾದಳು.
ಮಹಿಳೆಯನ್ನು ಹೊನ್ನು, ಮಣ್ಣುಗಳೊಂದಿಗೆ ಸಮೀಕರಿಸಿ ಅವಳ ವ್ಯಕ್ತಿತ್ವವನ್ನು ಜಡತ್ವಗೊಳಿಸಲಾಗಿದೆ. ಜೀವವಾಹಿನಿ ಜೀವದಾಯಿನಿ ಹೆಣ್ಣು ಹೆರುವ ಹೊರುವ * ಯಂತ್ರವಾಗಿ ಮಾರ್ಪಾಟಾಗಿದ್ದು ವಿಷಾದಕರವೇ! ಹೆಣ್ಣನ್ನು ಕೆಲವೊಮ್ಮೆ ದೈವತ್ವಕ್ಕೇರಿಸಿ ಗೌರವಿಸಿದರೆ, ಮಗದೊಮ್ಮೆ ಮಾಯೆ, ಆಬಲೆ ಎಂಬ ಹಣೆಪಟ್ಟಿ ಅಂಟಿಸಿ 'ಅಧೀನಕ್ಕೊಳಪಡಿಸಲಾಗಿದೆ. ವಾಸ್ತವದಲ್ಲಿ ಸ್ತ್ರೀ-ಪುರುಷ ಸೃಷ್ಟಿಯಲ್ಲಿ ಸಹಜ ಜೀವಿಗಳು. ಜೈವಿಕ ವ್ಯತ್ಯಾಸ ಸಹಜವಾಗಿದ್ದರೂ ಹೆಣ್ಣನ್ನು ಕೀಳಿಕರಿಸಿ, ವಿಜೃಂಭಿಸಿ ತನಗೆ ಅನುವಾಗುವಂತೆ ಪುರುಷ ವ್ಯವಸ್ಥೆ ಬದಲಾಯಿಸಿದೆ. ಹೆಣ್ಣಿನ ಚಾರಿತ್ರ್ಯದ ಕುರಿತು ಚ-ರಿತ
Be the first to know about new collections and special offers.