Subscribe to our emails
Be the first to know about new collections and special offers.
ಪ್ರಸ್ತಾವನೆ
ಜಗನ್ಮಾತೆಯ ಅನೇಕ ರೂಪಗಳಲ್ಲಿ ಬನಶಂಕರೀ, ಶಾಕಂಭರೀ ಎಂಬ ಹೆಸರಿನ ರೂಪವೂ ಒಂದು. ಶಕ್ತಿ ಸ್ವರೂಪಿಣಿಯಾದ ಮಹಾಮಾತೆಯ ದಿವ್ಯ ಮಹಿಮೆಯು ಸ್ಕಾಂದ ಪುರಾಣದಲ್ಲಿ ಉಕ್ತವಾಗಿದೆ. ಬನಶಂಕರೀ ದೇವಾಲಯಗಳು ಬಾದಾಮಿ ಹಾಗೂ ಬೆಂಗಳೂರಿನಲ್ಲಿ ಖ್ಯಾತವಾಗಿವೆ.
ಈ ಪುಸ್ತಕದಲ್ಲಿ ಬನಶಂಕರೀ ಪೂಜಾವಿಧಿಯನ್ನು ಕಟ್ಟೋಕ್ತ ಪ್ರಕಾರವಾಗಿ ಸಂಗ್ರಹಿಸಿ ಕೊಡಲಾಗಿದೆ. ಬಾದಾಮಿ ಹಾಗೂ ಬೆಂಗಳೂರಿನ ಬನಶಂಕರೀ ಕ್ಷೇತ್ರಗಳ ಮಹಿಮೆಯನ್ನು ಸ್ಕಾಂದ ಪುರಾಣದಿಂದ ಸಂಗ್ರಹಿಸಿ, ಸಹಸ್ರನಾಮಾವಳೀ ಹಾಗೂ ಇತರ ಸ್ತೋತ್ರಗಳೊಡನೆ ಸೇರಿಸಿ ಭಕ್ತರ ಅವಗಾಹನೆಗೆ ನೀಡಲಾಗಿದೆ. ಮಹಿಮಾ ಕಥೆಯನ್ನು ಸರಳ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ನೀಡಲು ಇಲ್ಲಿ ಯತ್ನಿಸಲಾಗಿದೆ. ಈ ಕಥಾ ಭಾಗವನ್ನು ಮಂಗಳವಾರ - ಶುಕ್ರವಾರ ಅಮಾವಾಸ್ಯೆ ಹಾಗೂ ಮಣ್ಣಿಮೆಗಳಂದು ಶ್ರದ್ಧಾಭಕ್ತಿಗಳಿಂದ ಪಾರಾಯಣ ಮಾಡಿ ದೇವೀಭಕ್ತರು ಶಾಕಂಬರಿ ದೇವಿಯ ಕೃಪೆಗೆ ಪಾತ್ರರಾಗಲೆಂದು ಹಾರೈಸುತ್ತೇವೆ.
ಈ ಪುಸ್ತಕವನ್ನು ಆಸ್ತಿಕ ಓದುಗರು ಎಂದಿನಂತೆ ಸ್ವಾಗತಿಸುವರೆಂದು ನಂಬಿ, ಶ್ರೀನಿಧಿ ಪಬ್ಲಿಕೇಷನ್ಸ್ರವರನ್ನು ಅಭಿನಂದಿಸಿ, ದೇವಿಯ ಕೃಪಾಶೀರ್ವಾದವನ್ನು ಬೇಡುತ್ತೇನೆ.
ಭಾವಶಿ ಬನಶಂಕರಿಯು ಎಲ್ಲರನ್ನೂ ಸಲಹಲೆಂದು ಹಾರೈಕೆ.
ಪುಷ್ಯ ಪೂರ್ಣಿಮಾ (ಬನದ ಹುಣ್ಣಿಮೆ)
ಪದ್ಮನಾಭ ಶರ್ಮ
Be the first to know about new collections and special offers.