ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಮುಖ್ಯಸ್ಥರಾಗಿದ್ದ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಗಳು ಅಪಾರ ಜ್ಞಾನವಂತ ಹಾಗೂ ಅತ್ಯಂತ ಸರಳ ಸ್ವಾಮೀಜಿಯೆಂದೇ ಪ್ರಸಿದ್ಧರಾಗಿದ್ದರು. ತಮ್ಮ ಪ್ರವಚನಗಳಲ್ಲಿ ನೂರಾರು ಕತೆಗಳನ್ನು ಹೇಳುತ್ತಿದ್ದ ಅವರು, ಆ ಕತೆಗಳ ಮೂಲಕವೇ ನಮಗೆ ಉತ್ತಮ ಬದುಕನ್ನು ಹೇಗೆ ಬದುಕಬೇಕು ಎಂಬ ನೀತಿಯನ್ನು ಹೇಳುತ್ತಿದ್ದರು. ಬದುಕಿನ ಪಾಠವನ್ನು ಕಲಿಸುವ ಅವರ ಉಪನ್ಯಾಸಗಳಿಂದ ಆಯ್ದುಕೊಂಡು ಈ ಕತೆಗಳು ಎಲ್ಲ ವಯೋಮಾನದವರಿಗೂ ನಿತ್ಯ ನೂತನ. ನಾವು ಹೇಗೆ ಸುಂದರ ಬದುಕನ್ನು ನಡೆಸಬೇಕು ಎಂಬುದಕ್ಕೆ ಈ ಕತೆಗಳು ದಾರಿದೀಪವಾಗಿವೆ.