Basavaraja Naikar
ಶ್ರೀ ಕನಕದಾಸರು
ಶ್ರೀ ಕನಕದಾಸರು
Publisher - ನ್ಯಾಶನಲ್ ಬುಕ್ ಟ್ರಸ್ಟ್
Regular price
Rs. 55.00
Regular price
Rs. 55.00
Sale price
Rs. 55.00
Unit price
/
per
- Free Shipping Above ₹250
- Cash on Delivery (COD) Available
Pages - 104
Type - Paperback
ಕನ್ನಡದ ಪ್ರಮುಖ ಸಂತಕವಿಗಳಲ್ಲಿ ಒಬ್ಬರಾದ ಕನಕದಾಸರ ಜೀವನಚರಿತ್ರೆಯಿದು. ಬಾಲ್ಯದಲ್ಲಿಯೇ ಅಸಾಮಾನ್ಯ ಪ್ರತಿಭಾಶಾಲಿಗಳಾಗಿದ್ದ ಕನಕದಾಸರು ಧಾರ್ಮಿಕ ಕಾವ್ಯವನ್ನು ರಚಿಸುವಲ್ಲಿ ಪರಿಣಿತರಾಗಿದ್ದರು. ಅವರು ತಮ್ಮ ಗೃಹಸ್ಥ ಜೀವನವನ್ನು ತ್ಯಜಿಸಿ, ಸನ್ಯಾಸಿಯ ಜೀವನವನ್ನು ಸ್ವೀಕರಿಸಿ ಕೊನೆಯವರೆಗೂ ಬೇರೆ ಬೇರೆ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತ ಬಾಳಿದರು, ಶ್ರೀಹರಿಯ ಪರಮಭಕ್ತರಾದ ಅವರು ತಮ್ಮ ಸುತ್ತಲಿನ ಜನರಿಗೆ ಆಧ್ಯಾತ್ಮಿಕತೆಯನ್ನು ಬೋಧಿಸಿದರಲ್ಲದೆ ತಮ್ಮದೇ ಆದ ಮಧುರಶೈಲಿಯಲ್ಲಿ ಆನೇಕ ಧಾರ್ಮಿಕ ಕಾವ್ಯಗಳನ್ನೂ ಕೀರ್ತನೆಗಳನ್ನೂ ರಚಿಸಿದರು. ಅವರು ಬಸವೇಶ್ವರ, ಅಕ್ಕಮಹಾದೇವಿ, ಪುರಂದರದಾಸ, ಏಕನಾಥ, ತುಕಾರಾಮ, ಚೈತನ್ಯ, ಲಲ್ಲೇಶ್ವರಿ, ಮೀರಾಬಾಯಿ ಮತ್ತು ಕಬೀರ ಮುಂತಾದ ಸಂತಕವಿಗಳ ತಾರಾವಳಿಗೆ ಸೇರಿದ್ದಾರೆ.
ಡಾ. ಬಸವರಾಜ ನಾಯ್ಕರ, ಎಂ.ಎ., ಪಿಎಚ್ .ಡಿ., ಡಿ.ಲಿಟ್. (ಕ್ಯಾಲಿಫೋರ್ನಿಯ), ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಇಂಗ್ಲಿಷ್ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಅವರು ದ್ವಿಭಾಷಾ ಲೇಖಕರಾಗಿದ್ದಾರೆ. ಅವರು ಕನ್ನಡದಲ್ಲಿ ಹದಿನೈದು ಪುಸ್ತಕಗಳನ್ನು ಪಕಟಿಸಿದ್ದು ಅವುಗಳಲ್ಲಿ ಗಿಲ್ಗಮೆಶ್ ಮಹಾಕಾವ್ಯ ಮತ್ತು ಜೆ.ಎಂ. ಸಿಂಗ್‌ನ ನಾಟಕಗಳ ಅನುವಾದಗಳು ಪ್ರಮುಖವಾಗಿವೆ. ಇಂಗ್ಲಿಷಿನಲ್ಲಿ ಹದಿನೈದಕ್ಕಿಂತ ಹೆಚ್ಚು ಮಸ್ತಕಗಳನ್ನು ಪ್ರಕಟಿಸಿದ್ದು, ಅವುಗಳಲ್ಲಿ Shakespeare's Last Plays : A Study in Epic Affirmation ಮತ್ತು The Folk Theatre of North-Karnataka ಪ್ರಮುಖವಾಗಿವೆ. ಸೃಜನಶೀಲ ಲೇಖಕರೂ ಆದ ಅವರು ಇಂಗ್ಲಿಷಿನಲ್ಲಿ The Thief of Nagarahalli and Other Stories, The Rebellious Rani of Belavadi and Other Stories ಎಂಬ ಕಥಾಸಂಕಲನಗಳನ್ನೂ ನರಗುಂದದ ಕ್ರಾಂತಿವೀರನಾದ ಭಾಸ್ಕರರಾವ್ ಭಾವೆಯನ್ನು ಕುರಿತ The Sun Behind the Cloud ಎಂಬ ಐತಿಹಾಸಿಕ ಕಾದಂಬರಿಯನ್ನೂ ಪ್ರಕಟಿಸಿದ್ದಾರೆ.
ಡಾ. ನಾಯ್ಕರ ಅವರು ಟ್ರಸ್ಟಿಗಾಗಿ ಇಂಗ್ಲಿಷ್‌ನಲ್ಲಿ ಬರೆದ Kanakadasa : The Golden Servant of Lord Hari ಈಗಾಗಲೇ ಪ್ರಕಟವಾಗಿದ್ದು ಅದರ ಈ ಕನ್ನಡಾನುವಾದವನ್ನು ಸಹ ಅವರೇ ಒದಗಿಸಿದ್ದಾರೆ.

Share
Subscribe to our emails
Subscribe to our mailing list for insider news, product launches, and more.