ಆಸಕ್ತಿಯಿಂದ ಓದಿಸಿಕೊಳ್ಳುವ ವಿಶಿಷ್ಟವಾದ-ಕೆಲವೊಮ್ಮೆ ಶಿಷ್ಟವಲ್ಲದ ಈ ಸಂಕಲನದ ಕತೆಗಳು ಕನ್ನಡ ಸಣ್ಣಕತೆಗಳ ಕಣಜಕ್ಕೆ ಒಂದು ಒಳ್ಳೆಯ ಕೊಡುಗೆ ಎನ್ನಬಹುದು. ಇವರಿಗೆ ಮಲೆನಾಡಿನ ಬಗ್ಗೆ ಗಾಢವಾದ ಅನುಭವವಿರುವುದರಿಂದ ಈ ಹಿನ್ನೆಲೆಯಲ್ಲಿ ಕಾದಂಬರಿಗಳನ್ನು ಬರೆದರೆ ಒಳಿತು. ಆನಂದ್ ಅವರ ಕಥನಕಲೆ ತನ್ನ ಕೊರತೆಗಳನ್ನು ಕಳಚಿಕೊಂಡು ಇನ್ನು ಪ್ರಬುದ್ಧವಾಗಲಿ ಎಂದು ಹಾರೈಸಿ, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
-ಸಿ.ಪಿ.ಕೆ. ವಿದ್ವಾಂಸರು ಮತ್ತು ಹಿರಿಯ ಸಾಹಿತಿಗಳು, ಮೈಸೂರು