Skip to product information
1 of 2

Saraswati. T. N.

ಶಾರಿಸುತೆಯ ಟರ್ಕಿ ಪ್ರವಾಸ ಕಥೆ

ಶಾರಿಸುತೆಯ ಟರ್ಕಿ ಪ್ರವಾಸ ಕಥೆ

Publisher - ಐಬಿಹೆಚ್ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 132

Type - Paperback

16 ನೆಯ ಅಂತರರಾಷ್ಟ್ರೀಯ ಟ್ರಾನ್ಸಕಾಂಟಿನೆಂಟಲ್ ಅಖಿಲಭಾರತ ಕವಯತ್ರಿಯರ ಸಮ್ಮೇಳನ ಟರ್ಕಿ 2022 ನವೆಂಬರ 1 ರಿಂದ 15 ರವರೆಗೆ ನಾವು ಮಾಡಿದ ಪ್ರವಾಸ, ವಿಸ್ಮಯ ಲೋಕದಲ್ಲಿ ತೇಲಾಡಿದ ಅನುಭವ. ಟರ್ಕಿ ವಿದೇಶ ಪ್ರವಾಸಕ್ಕೆ ಭಾರತದಾದ್ಯಂತ ಕೇರಳ, ಕರ್ನಾಟಕ, ಮಹಾರಾಷ್ಟ್ರ, ಒರಿಸ್ಸಾ, ಅಸ್ಸಾಂ, ಮೇಘಾಲಯ, ದೆಹಲಿ, ಕಲ್ಕತ್ತಾ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗು ಪಂಜಾಬ್ ಸಹೋದರಿಯರು, ಜೊತೆಗೆ ಸಂಸ್ಥೆಯ ಸಂಸ್ಥಾಪಕರಾದ ಡಾ. ಲಾರಿ ಅಜ್ಹಾದ್ ಮತ್ತು ರೋಷನ್ ದಂಪತಿಗಳ ಸಮೇತ ಒಟ್ಟು 39 ಎಐಪಿಸಿ ಸದಸ್ಯರುಗಳು ಕುಟುಂಬದ ರೀತಿಯಲ್ಲಿ ಒಗ್ಗೂಡಿ ಪ್ರವಾಸ ಪ್ರಯಾಸವಾಗದಂತೆ, ಭಾಷೆ ಸಾಹಿತ್ಯ, ಕಲೆ ಸಂಗೀತ, ಸಂಸ್ಕೃತಿಯ ಸಮ್ಮಿಲನ, ಅನೇಕತೆಯಲ್ಲಿ ಏಕತೆಯ ಪ್ರತೀಕವಾದಂತಹ ಅವಿಸ್ಮರಣೀಯ, ಅನನ್ಯ ವಿದೇಶಿ ಪ್ರವಾಸ ಅಂದರೆ ಅತಿಶಯೋಕ್ತಿಯಾಗಲಾರದು. ಈ ನೆಲ, ನದಿ, ಬೆಟ್ಟಗಳು ಮಾನವರನ್ನು ಒಂದುಗೂಡಿಸುತ್ತವೆ ಎಂಬುದಕ್ಕೆ ನಾವುಗಳು ಸಾಕ್ಷಿಯಾಗಿದ್ದೆವು.

ಕರ್ನಾಟಕದಿಂದ ಬಂದಿದ್ದ 7ಮಂದಿ ಸಹೋದರಿಯರಲ್ಲಿ ಸರಸ್ವತಿ ಟಿ.ಎನ್ ಅವರು ಈ ಪ್ರವಾಸದ ಪಯಣದಲ್ಲಿ ಭಾವ ತುಂಬಿದ ಮಧುರ ಧ್ವನಿಯ ಕನ್ನಡ- ಹಿಂದಿ ಹಾಡುಗಳಿಂದ ಮನರಂಜಿಸಿದ್ದರು. ಹಾಡಿದ ಹಾಡುಗಳು ಇನ್ನೂ ಕಿವಿಯಲ್ಲಿ ಗುನುಗುಡುತ್ತಾ ಇವೆ. ಅವರದು ಸ್ನೇಹಮಯಿ ಸ್ವಭಾವ. ಅವರ ನಯ ನಡೆನುಡಿ ಪ್ರವಾಸದಲ್ಲಿ ಬಹು ಬೇಗ ಆತ್ಮೀಯರನ್ನಾಗಿಸಿ ಬಿಟ್ಟಿತ್ತು. ಇಸ್ತಾನ್‌ಬುಲ್‌ನಲ್ಲಿ ವೇದಿಕೆಯ ಮೇಲೆ ಎಐಪಿಸಿ ಕನ್ನಡಿಗರಿಗೆ ಮಾರ್ಗದರ್ಶಿಯಾಗಿರುವ ಜಿ. ಎಸ್. ಸರೋಜಾವರ ನೇತೃತ್ವದಲ್ಲಿ 'ಜೈ ಭಾರತ ಜನನಿಯ ತನುಜಾತೆ' ಹಾಡಿಗೆ ತನ್ಮಯತೆಯಿಂದ ನೃತ್ಯಮಾಡಿದ್ದು ಹೇಗೆ ಮರೆಯಲಿ ಸಾಧ್ಯ....!!!!

ಸರಸ್ವತಿಯವರದು ಇದು ಮೊದಲ ವಿದೇಶ ಪ್ರವಾಸವಾಗಿದ್ದು, ಟರ್ಕಿ ಎಂಬ ಓಟಮನ್ ಐಕಾನ್ ದೇಶಿ ನೆಲದಲ್ಲಿ ಕಾಲಿಟ್ಟಾಗ ಅನುಭವಿಸಿದ ರೋಮಾಂಚಕಾರಿ ಅನುಭವಗಳನ್ನು ರಸವತ್ತಾಗಿ ದಾಖಲಿಸಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)