1
/
of
2
S. L. Bhyrappa
ಸತ್ಯ ಮತ್ತು ಸೌಂದರ್ಯ
ಸತ್ಯ ಮತ್ತು ಸೌಂದರ್ಯ
Publisher - ಸಾಹಿತ್ಯ ಭಂಡಾರ
Regular price
Rs. 425.00
Regular price
Rs. 425.00
Sale price
Rs. 425.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages - 254
Type - Hardcover
Couldn't load pickup availability
Truth and Beauty: A Study in Correlation ಎಂಬ ಹೆಸರಿನ ನನ್ನ ಇಂಗ್ಲಿಷ್ ಗ್ರಂಥವು ಬಡೋದೆಯ ಮಹಾರಾಜಾ ಸಯಾಜಿರಾವ್ ವಿಶ್ವವಿದ್ಯಾನಿಲಯದಿಂದ ಕಳೆದ ವರ್ಷ ಪ್ರಕಟವಾಯಿತು. ಈ ಕನ್ನಡ ಗ್ರಂಥವು ಬಹುಮಟ್ಟಿಗೆ ಅದನ್ನು ಅನುಸರಿಸಿದ್ದರೂ ಇಂಗ್ಲಿಷಿನ ಗ್ರಂಥದಲ್ಲಿ ಇಲ್ಲದ ಕೆಲವು ಅಂಶಗಳನ್ನು ಇದರಲ್ಲಿ ಬರೆದಿದ್ದೇನೆ; ಮತ್ತು ಅನೇಕ ವಿಷಯಗಳನ್ನು ಇದರಲ್ಲಿ ಹೆಚ್ಚು ವಿವರವಾಗಿ ಚರ್ಚಿಸಿದ್ದೇನೆ. ಕನ್ನಡದಲ್ಲಿ ಈ ವಿಷಯವನ್ನು ಕುರಿತ ಗ್ರಂಥಗಳಿಲ್ಲದಿರುವುದು ಮತ್ತು ದರ್ಶನಶಾಸ್ತ್ರದ ದೃಷ್ಟಿಯಿಂದ ಇಲ್ಲಿ ವಿಷಯಗಳನ್ನು ಚರ್ಚಿಸಿರುವುದು ಮೊದಲಾದ ಕಾರಣಗಳಿಂದ ಈ ಗ್ರಂಥವನ್ನು ಇಂಗ್ಲಿಷಿನದಕ್ಕಿಂತ ವಿಸ್ತರಿಸಿ ಬರೆಯುವುದು ಅನಿವಾರ್ಯವಾಯಿತು. ಇಂಗ್ಲಿಷ್‌ನಲ್ಲಿದ್ದ ಅತಿಯಾಗಿ ತಾಂತ್ರಿಕವೆಂದು ತೋರಿದ ಕೆಲವು ವಿಭಾಗಗಳನ್ನು ಕನ್ನಡದಲ್ಲಿ ಕೈಬಿಟ್ಟಿದ್ದೇನೆ. ಆದರೂ ಇಂಗ್ಲಿಷ್‌ನಲ್ಲಿ ೧೫೦ ಪುಟಗಳಿದ್ದ ವಿಷಯ ಕನ್ನಡದಲ್ಲಿ ಸುಮಾರು ಎರಡರಷ್ಟು ಬೆಳೆದಿದೆ. ಒಟ್ಟಿನಲ್ಲಿ ಇದು ಇಂಗ್ಲಿಷಿನದರ ನೇರ ಅನುವಾದವಲ್ಲ.
ಸಾಮಾನ್ಯವಾಗಿ ಕನ್ನಡದಲ್ಲಿ ಬಳಕೆಯಲ್ಲಿರುವ ಶಬ್ದಗಳನ್ನೇ ಬಳಸಿ ಬರವಣಿಗೆಯು ಸರಳವಾಗಿರುವಂತೆ ಎಚ್ಚರಿಕೆ ವಹಿಸಿದ್ದರೂ, ಗ್ರಂಥದ ಕೊನೆಯಲ್ಲಿ ಪಾರಿಭಾಷಿಕ ಶಬ್ದಗಳ ಒಂದು ಪಟ್ಟಿಯನ್ನು ಕೊಟ್ಟಿದ್ದೇನೆ.
ಇಂತಹ ತಾಂತ್ರಿಕ ವಿಷಯದ ಗ್ರಂಥದ ಪ್ರಕಟಣೆಯನ್ನೂ ಉತ್ಸಾಹದಿಂದ ಹೊತ್ತಿರುವ ಸಾಹಿತ್ಯ ಭಂಡಾರದ ಶ್ರೀ ಗೋವಿಂದರಾಯರಿಗೂ ಕರಡುಪ್ರತಿ ತಿದ್ದುವುದರಲ್ಲಿ ನೆರವಾದ ಮಿತ್ರ ಶ್ರೀ ಎಂ.ಎಸ್.ಕೆ. ಪ್ರಭು ಅವರಿಗೂ ನಾನು ಕೃತಜ್ಞ
-ಎಸ್.ಎಲ್. ಭೈರಪ್ಪ

Share

Subscribe to our emails
Subscribe to our mailing list for insider news, product launches, and more.