Skip to product information
1 of 2

Translated By K. Nallathambi

ಸರಸವಾಣಿಯ ಗಿಣಿಗಳು

ಸರಸವಾಣಿಯ ಗಿಣಿಗಳು

Publisher - ಪಂಚಮಿ ಪಬ್ಲಿಕೇಷನ್ಸ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 136

Type - Paperback

ಕನ್ನಡದಿಂದ ತಮಿಳಿಗೂ, ತಮಿಳಿನಿಂದ ಕನ್ನಡಕ್ಕೂ ಬಹಳ ಸರಾಗವಾಗಿ ಓಡಿಯಾಡುತ್ತಾ, ಎರಡರ ನಡುವಿನ ಸಂಬಂಧಸೇತುವಾಗಿರುವ ಕೆ. ನಲ್ಲತಂಬಿಯವರು ಇಂತಹ ಸೌಹಾರ್ದಯುತವಾದ ಮಧುರ ಸ್ಮೃತಿಯ ಕೊಂಡಿಯಾಗಿ ನಮಗೆ ದಕ್ಕಿರುವುದು ನಮ್ಮ ಭಾಗ್ಯ. ಅವರ ಈ ಸಾಹಿತ್ಯ ಪಯಣ ಹಾಗೆ ನೋಡಿದರೆ ಎರಡೂ ಭಾಷಿಕರಿಗೂ ಅತ್ಯಂತ ಚಿರಪರಿಚಿತ. ತೀರಾ ಇತ್ತೀಚಿಗೆ ಅನುವಾದಕ್ಕೆ ಕಾಲಿಟ್ಟವರಾದರೂ, ಪ್ರಾರಂಭದ ಕಷ್ಟಗಳನ್ನೆಲ್ಲಾ ದಾಟಿ ನಿಂತ ಅವರೀಗ ಕೇವಲ ಓದುಗರ ಕೈ ಹಿಡಿದು ಮೌನವಾಗಿ ಗಡಿ ದಾಟಿಸುತ್ತಿದ್ದಾರೆ.

ಪ್ರಸ್ತುತ ತಮಿಳಿನಿಂದ ಕನ್ನಡಕ್ಕೆ ಬಂದ ಅವರ ಎರಡನೇ ಅನುವಾದಿತ ಸಣ್ಣ ಕತೆಗಳ ಗುಚ್ಛ 'ಸರಸವಾಣಿಯ ಗಿಣಿಗಳು', ಹತ್ತು ಕತೆಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿ ವೈವಿಧ್ಯತೆಯಿದೆ. ಬೇರೆ ಬೇರೆ ಕಾಲಘಟ್ಟಗಳಲ್ಲಿ ಮೈದಾಳಿರುವಂತೆ ಕಾಣುವ ಇಲ್ಲಿನ ಕತೆಗಳಲ್ಲಿ, ಮರು ವ್ಯಾಖ್ಯಾನಕ್ಕೊಳಪಟ್ಟ ಎಂಟನೇ ಶತಮಾನದ ಧಾರ್ಮಿಕ ಸಂಕಟ ಮತ್ತು ಸಂಘರ್ಷಗಳ ಐತಿಹಾಸಿಕ-ಪೌರಾಣಿಕ ಕಥನ, ಬದಲಾವಣೆಯ ಹೊಸ್ತಿಲಲ್ಲಿ ನಿಂತು ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಸ್ಥಿತ್ಯಂತರಕ್ಕೊಳಗಾದ ಹಳ್ಳಿಯ ಮುಗ್ಧ ಪರಿಸರ ಹಾಗೂ ಇವತ್ತಿನ ಕಾರ್ಪೋರೇಟ್ ಜಗತ್ತು ಎಂದು ಮೂರುಹಂತದಲ್ಲಿ ವಿಸ್ತಾರಗೊಂಡ ಕಥಾಲೋಕವೊಂದು ಅನಾವರಣಗೊಂಡಿದೆ. ವಿಶಿಷ್ಟ ದೃಷ್ಟಿಕೋನದ ಹಾಗೂ ವಿಭಿನ್ನ ಆಯಾಮದ ಕಥನಕ್ರಮವನ್ನು ಅನುಸರಿಸಿರುವ ಕೆಲ ಹೊಸ ಮಾದರಿಯ ಕತೆಗಳನ್ನು ಕಾಣಲೂ ಇಲ್ಲಿ ಸಾಧ್ಯವಿದೆ.

-ಜಯಶ್ರೀ ಕಾಸರವಳ್ಳಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)