Title : Samaya = Hana, Time-Management, Writer : Satyesh N. Bellur, Publisher : Sawanna Enterprises.

ಸಮಯ = ಹಣ

Rs. 150.00
Skip to product information
Title : Samaya = Hana, Time-Management, Writer : Satyesh N. Bellur, Publisher : Sawanna Enterprises.
ಸಮಯ = ಹಣ
Satyesh N. Bellur
Publisher - ಸಾವಣ್ಣ ಪ್ರಕಾಶನ
Type - Paperback
Pages - 116
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.

Pickup available at Harivu Books New Shop

Usually ready in 24 hours

View store information

ಸಮಯ = ಹಣ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ನಿಮಗೆಲ್ಲ ಹಣ ಮಾಡಬೇಕು ಎಂಬ ಬಯಕೆ ಇದೆಯೆ? ಹಾಗಿದ್ದರೆ, ನೀವೆಲ್ಲ ಸಮಯವನ್ನು ಗೌರವಿಸುತ್ತ ಅದನ್ನು ಪಾಲಿಸಿದರೆ ಸಾಕು. ಏನಿದು? ಸಮಯಕ್ಕೂ ಹಣಕ್ಕೂ ಅದ್ಯಾವ ನಂಟು ಎಂದಿರಾ? ಹಾಗಿದ್ದರೆ, ಈ ಕೃತಿ ನಿಮಗೆ...

ಜೀವನದಲ್ಲಿ ಯಶಸ್ಸನ್ನು, ಅಪಾರ ಹಣವನ್ನು ಕಂಡಿರುವ ಯಾವುದೇ ಸಾಧಕರನ್ನು ನೋಡಿ. ಅವರೆಲ್ಲರೂ ಸಮಯದ ಪರಿಪಾಲನೆಯಲ್ಲಿ ಯಾವುದೇ ರಾಜಿ ಮಾಡಿಕೊಂಡವರಲ್ಲ. ಅವರೆಲ್ಲರ ಯಶಸ್ಸಿನ ಹಿಂದೆ ಕಂಡೂ ಕಾಣದಂತೆ ಇರುವ ಅವರ ವ್ಯಕ್ತಿತ್ವದ ಗುಣವಿಶೇಷವೇ ಅವರಿಗೆ ಸಮಯದ ಬಗ್ಗೆ ಇರುವ ಅಪಾರ ಕಾಳಜಿ ಎಂದು ನಿಮಗನ್ನಿಸದ್ದರೆ, ಈ ಕೃತಿ ನಿಮಗೆ...

ಹಣ ಹೋದರೆ ಮತ್ತೆ ಹಣ ಗಳಿಸಬಹುದು. ಸಮಯ ಮಿಂಚಿದರೆ ಅದನ್ನು ಮತ್ತೆ ಪಡೆಯಲು ಸಾಧ್ಯವೇ ಇಲ್ಲ ಎಂಬ ಸರಳವಾದ ಜೀವನ್ಮೌಲ್ಯದ  ಬಗ್ಗೆ ನಿಮಗೆ ನಂಬಿಕೆ ಇದ್ದರೆ, ಈ ಕೃತಿ ನಿಮಗೆ...

ಸಮಯದ ಮಹತ್ವವೇನು? ಸಮಯದ ನಿರ್ವಹಣೆ ಹೇಗೆ ಸಾಧ್ಯ? ಸಮಯವನ್ನು ಸಾಧನೆಯ ಪಥದಲ್ಲಿ ಬಳಸಿಕೊಳ್ಳುವುದು ಹೇಗೆ? ಸಮಯದ ಪರಿಪಾಲನೆಯಲ್ಲಿ ನಮಗೆ ನೆರವಾಗಬಲ್ಲ ಸರಳವಾದ ವಿಧಿವಿಧಾನಗಳು ಯಾವುವು? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕಾಡುತ್ತದ್ದರೆ, ಈ ಕೃತಿ ನಿಮಗೆ...

ಈ ಕೃತಿಯಲ್ಲಿ ಸಮಯದ ಪರಿಪಾಲನೆಗಾಗಿ ಇರುವ ಸುಲಭವಾದ ಕ್ರಮವನ್ನು ನೀವು ಅರ್ಥ ಮಾಡಿಕೊಂಡು ಅದನ್ನು ನಿಮ್ಮ ಜೀವನದಲ್ಲಿ ತಂದುಕೊಂಡರೆ, ನಿಮ್ಮ ಬದುಕಿನಲ್ಲಿ ಯಶಸ್ಸು ಖಂಡಿತ. ಅಂದಹಾಗೆ, ತನ್ಮೂಲಕ ಹಣವನ್ನೂ ಗಳಿಸುತ್ತೀರಿ ಎಂಬುದರಲ್ಲಿಯಂತೂ ಎಳ್ಳಷ್ಟೂ ಸಂಶಯ ಬೇಡ.

ಏಕೆಂದರೆ, ಸಮಯ = ಹಣ...

You may also like

Subscribe to our emails

Be the first to know about new collections and special offers.