M Ramarav
ರಾಜಕುಮಾರಿಯಾದ ಕಪ್ಪೆ
ರಾಜಕುಮಾರಿಯಾದ ಕಪ್ಪೆ
Publisher - ಐಬಿಹೆಚ್ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 88
Type - Paperback
Couldn't load pickup availability
ಎಂ. ರಾಮರಾವ್ ಅವರ ಪೂರ್ಣ ಹೆಸರು ಮಠದ ರಾಮರಾವ್. ರಾಮರಾಯರು ಇಂಗ್ಲಿಷ್ ಅಧ್ಯಾಪಕರಾಗಿದ್ದರು. ಸುಮಾರು 50-60 ವರ್ಷಗಳ ಹಿಂದೆ ಅವರ ವಿದ್ಯಾರ್ಥಿಗಳಾಗಿದ್ದವರು, ತಮ್ಮ ಗುರುಗಳು ನಿಲ್ಲುತ್ತಿದ್ದ ಭಂಗಿ, ಅವರ ಬೋಧನಾ ಶೈಲಿ, ತಿಳಿಹಾಸ್ಯ ಪ್ರವೃತ್ತಿ ಹಾಗೂ ಪಾಠ ಕೇಳುತ್ತಿರುವವರನ್ನು ತನ್ಮಯರಾಗಿಸಿ ಬೇರೊಂದು ಲೋಕಕ್ಕೇ ಕರೆದೊಯ್ಯುತ್ತಿದ್ದ ಅವರ ವಾಗ್ಝರಿ ಮುಂತಾದ ವಿವರಗಳನ್ನು ಇಂದಿಗೂ ಮೆಲುಕು ಹಾಕುತ್ತಾರೆ.
ರಾಮರಾಯರು ಇಂಗ್ಲಿಷ್ ಅಧ್ಯಾಪಕರಾದರೂ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರಿಗೆ ಅತ್ಯಂತ ಪ್ರಿಯವಾದದ್ದು ಮಕ್ಕಳ ಸಾಹಿತ್ಯ. ಗ್ರಿಮ್ಸ್ ಸೋದರರ ಮತ್ತು ಹ್ಯಾನ್ಸ್ ಕ್ರಿಶ್ಚಿಯನ್ ಆಂಡರಸನ್ ಅವರ ಅನೇಕ ಕಥೆಗಳನ್ನು ಇವರು ಮನೋಜ್ಞವಾಗಿ ಅನುವಾದಿಸಿದ್ದಾರೆ. ಕೇವಲ ಮಕ್ಕಳ ಕಥೆಗಳೇ ಅಲ್ಲದೆ ಪ್ರಬಂಧಗಳು, ಕವಿತೆಗಳು, ನಾಟಕಗಳು ಹಾಗೂ ವ್ಯಕ್ತಿಚಿತ್ರಗಳು ಸೇರಿದಂತೆ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಅವರು ಕೃತಿಗಳನ್ನು ರಚಿಸಿದ್ದಾರೆ.
ಗ್ರಿಮ್ಸ್ ಸೋದರರೆಂದೇ ಪ್ರಸಿದ್ಧಿಯಾಗಿರುವ ಜೇಕಬ್ ಗ್ರಿಮ್ ಮತ್ತು ವಿಲಿಯಮ್ ಗ್ರಿಮ್ ಅವರು 'ಗ್ರಿಮ್ಸ್ ಫೇರಿ ಟೇಲ್ಸ್'ನ ಲೇಖಕರು. ಅವರ ಕಥಾ ಸಂಕಲನದ ಮೊದಲ ಮುದ್ರಣ ಬಂದಿದ್ದು 1812ರಲ್ಲಿ. 1819ರಲ್ಲಿ ಅವರಿಗೆ ಮಾರ್ಬರ್ಗ್ (Marburg) ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ದೊರೆಯಿತು. ಕ್ರಿಯೆಗೆ ಹೆಚ್ಚಿನ ಮಹತ್ವ ನೀಡಿ, ಗಾದೆ ಮತ್ತು ಜನಪದ ಹಾಡುಗಳನ್ನು ಕಥೆಗಳಲ್ಲಿ ಅಳವಡಿಸಿ ಅವರು ರೂಪಿಸಿದ ಹೊಸ ಶೈಲಿ ಇಂದಿಗೂ ಮಾದರಿಯಾಗಿ ಉಳಿದಿದೆ.
ಡೆನ್ಮಾರ್ಕ್ ದೇಶದ ಲೇಖಕರಾದ ಹ್ಯಾನ್ಸ್ ಕ್ರಿಶ್ಚಿಯನ್ ಆಂಡರಸನ್ ಅವರು ಕಥೆ, ಕಾದಂಬರಿ, ಕವಿತೆ ಹಾಗೂ ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ನೂರೈವತ್ತಕ್ಕೂ ಹೆಚ್ಚಿನ ಸಂಖ್ಯೆಯ ಜಾನಪದ ಕಥೆಗಳು ಬಹುಮುಖ್ಯವಾದವು. ಅವರು ಡೆನ್ಮಾರ್ಕ್ ದೊರೆಯಿಂದ ದೊರೆತ ಅನುದಾನದಿಂದ ಯುರೋಪ್ ದೇಶದ ಪ್ರವಾಸ ಕೈಗೊಂಡು ಅನೇಕ ಕೃತಿಗಳನ್ನು ರಚಿಸಿದರು.
Share

Subscribe to our emails
Subscribe to our mailing list for insider news, product launches, and more.