Skip to product information
1 of 2

Sadashiva Soraturu

ಪುಟ್ಟ ದೇವರ ಕಣ್ಣೀರು

ಪುಟ್ಟ ದೇವರ ಕಣ್ಣೀರು

Publisher -

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 124

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಅವತ್ತು ನಮ್ಮೆಲ್ಲರ ಕೈಯಲ್ಲೂ ಛತ್ರಿಗಳಿದ್ದವು. ನಾವು ನಾಲ್ಕಾರು ಜನ ನಡೆಯುತ್ತಿದ್ದೆವು. ಛತ್ರಿ ನೋಡಿಯೇ ಮುಗಿಲ ಮೇಲೆ ಮೋಡಗಳು ಒಟ್ಟಾದವೊ ಏನೊ! ಒಂದು ಹನಿ ಬಿತ್ತು, ಅದರ ಹಿಂದೆ ಮತ್ತೊಂದು...ಸಣ್ಣಗೆ ಮಳೆ.
ಎಲ್ಲರೂ ಛತ್ರಿ ಬಿಡಿಸಿದರು. ನಾನು ಬಿಡಿಸಲಿಲ್ಲ. ಎಲ್ಲರೂ ನನ್ನ ನೋಡಿದರು. ನಾನು ಅವರನ್ನು ನೋಡಲಿಲ್ಲ. ಬೀಳುತ್ತಿದ್ದ ಹನಿಗಳನ್ನು ಎಣಿಸುತ್ತಿದ್ದೆ.
'ನೆಂದು ಹೋಗ್ತಿಯ ಛತ್ರಿ ಬಿಡಿಸು ಛತ್ರಿ.. ಕೂಗಿದರು ಅವರು.
'ನಂಗೆ ಮಳೆ ಇಷ್ಟ. ನೆನೆಯಬೇಕು ನಾನು ನೆನೆಯುವೆ' ಎಂದೆ
ಮಳೆಗೂ, ಅವರಿಗೂ ಗೊತ್ತಿಲ್ಲದ ಸತ್ಯವೊಂದಿತ್ತು. ನನ್ನ ಛತ್ರಿಯ ಕರಿ ಬಟ್ಟೆ ಹತ್ತಾರು ಕಡೆ ಹರಿದಿತ್ತು. ಛತ್ರಿ ಹರಿದಿರುವಾಗ ಮಳೆಯ ಗೆಳೆತನ ಅಷ್ಟು ಒಳ್ಳೆಯದಲ್ಲ..!
ಇದು ನನ್ನ ಬೇಗುದಿ. ಬಹುಶಃ ಜಗತ್ತಿನ ಬೇಗುದಿಯೂ ಹೌದು. ಬೇಗುದಿ ಕಳೆದುಕೊಳ್ಳಲು ಪದಗಳ ಕೊಂಡದಲ್ಲಿ ಹಾಯ್ದು ಬಂದೆ. ಸುಟ್ಟುಕೊಂಡೆ. ಬದುಕು ಯಾವತ್ತೂ ಗುಣವಾಗದ ವ್ರಣ. ನಿತ್ಯ ಬ್ಯಾಂಡೇಜ್ ಕಟ್ಟುತ್ತಲೇ ಇರಬೇಕು. ಮತ್ತದೆ ಪದಗಳ ಮೊರೆ ಹೋಗಬೇಕು. ಕಟ್ಟಬೇಕು ಕಳಚಬೇಕು ಎಸೆಯಬೇಕು. ಇಲ್ಲಿ ನಿಮ್ಮ ಗಾಯಕ್ಕೆ ಬ್ಯಾಂಡೇಜಿನ ಒಂದಷ್ಟು ಪರಿಕರಗಳು ಸಿಕ್ಕರೆ ನಾನು ಧನ್ಯ!

View full details

Talk about your brand

Share information about your brand with your customers. Describe a product, make announcements, or welcome customers to your store.