ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ

ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ

Rs. 100.00
Skip to product information
ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
Pramoda Karanam
Publisher - 
Type - Paperback
Pages - 88
- Free Shipping Above ₹400

- Cash on Delivery (COD) Available*
Rs. 100.00
Shipping calculated at checkout.

ದೃಶ್ಯಗಳ ಕೊಲಾಜ್ ಚಿತ್ರ

ತ್ರಿಕೋನ ಪ್ರೇಮಗಾಥೆಯನ್ನು ಸೊಗಸಾದ ದೃಶ್ಯಗಳ ಕೊಲಾಜ್ ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ ಲೇಖಕ ಪ್ರಮೋದ ಕರಣಂ. ಮೂವರ ಮನಸ್ಸಿನ ಭಾವನೆಗಳು, ಪ್ರೀತಿ-ಪ್ರೇಮಗಳ ನಡುವೆ ಮಿಡಿದು, ಮಧ್ಯೆ ಅನೇಕ ಟಿಪ್ಪಣಿಗಳೂ ಸೇರಿಕೊಂಡು ಇದೊಂದು ಸುಂದರ ಹೂಗುಚ್ಚವಾಗಿದೆ. ಹುಲಿಗೆಮ್ಮ ರೇಣುಕಾದೇವಿಯ ಮಹಿಮೆ, ಆಹಾರ ಸೇವನೆ, ಮುತ್ತಿನ ಮಹತ್ವ ಹಾಗೂ ವಿವಾಹ ಮುಂತಾದ ವಿಷಯಗಳನ್ನು ಕಾದಂಬರಿಗೆ ಪೂರಕವಾಗಿಸಿ ಮಾಹಿತಿ ನೀಡಿದ್ದಾರೆ. ಚಹಾ ಮತ್ತು ಕೊಡಗಿನ ಕೊಡವ ಸಂಪ್ರದಾಯಗಳ ಬಗ್ಗೆಯೂ ಇಲ್ಲಿ ಬೆಳಕು ಚೆಲ್ಲಲಾಗಿದೆ. ಇಬ್ಬರು ಹೆಣ್ಣುಗಳ ಮಧ್ಯೆ ಸಿಲುಕಿದ್ದ ನಾಯಕನನ್ನು ನಾಯಕಿಯೊಂದಿಗೆ ಸೇರಿಸಿ, ಭಗ್ನಹೃದಯಿ ಪ್ರೇಮಿಕೆಗೂ ವರನನ್ನು ಒದಗಿಸಿ, ನಾಟಕೀಯ ತಿರುವುಗಳೊಂದಿಗೆ ಕತೆಯನ್ನು ಸುಖಾಂತ್ಯಗೊಳಿಸಿದ್ದಾರೆ.

'ಸಾಧ್ಯ-ಅಸಾಧ್ಯಗಳ ನಡುವೆ' ಎಂಬ ತಮ್ಮ ಮೊದಲ ಕಾದಂಬರಿಯಿಂದ ಓದುಗರಿಗೆ ಪರಿಚಿತರಾಗಿರುವ ಪ್ರಮೋದ ಕರಣಂ, ತಮ್ಮ ಎರಡನೇ ಪ್ರಯತ್ನವನ್ನು ಇಲ್ಲಿ ದಾಖಲಿಸಿದ್ದಾರೆ. ಭಾಷೆಯ ಮೇಲಿನ ಹಿಡಿತ ಹಾಗೂ ಸೊಗಸಾದ ಉಪಮೆಗಳು ಕಾದಂಬರಿಯ ಅಂದವನ್ನು ಹೆಚ್ಚಿಸಿ, ಲೇಖಕರ ಬಗ್ಗೆ ಭರವಸೆ ಮೂಡಿಸುತ್ತವೆ. ಆರಂಭದ ಅರೆಕೊರೆಗಳನ್ನು ನೀಗಿಸಿಕೊಂಡು ಮಾಗುತ್ತಾ ಸಾಗಿದಲ್ಲಿ, ಕನ್ನಡಕ್ಕೊಬ್ಬ ಉತ್ತಮ ಕಾದಂಬರಿಕಾರ ದೊರೆಯುವುದರಲ್ಲಿ ಸಂದೇಹವಿಲ್ಲ.

— ಮಧುರಾ ಕರ್ಣಮ್,
ಖ್ಯಾತ ಬರಹಗಾರರು

You may also like

Subscribe to our emails

Be the first to know about new collections and special offers.