Skip to product information
1 of 2

Yandamoori Veerendranath | Kannada Yatiraj Veerambudhi

ಪರ್ಣಕುಟೀರ

ಪರ್ಣಕುಟೀರ

Publisher - Sahithya Prakashana

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 152

Type - Paperback

Gift Wrap
Gift Wrap Rs. 15.00

ಪರ್ಣಕುಟೀರ

"ಈ ಪ್ರೇಮ, ಆಪ್ಯಾಯತೆ ದುಡ್ಡಿನೊಂದಿಗೆ ಗಂಟು ಹಾಕಿಕೊಂಡಿವೆ. ಹೊಟ್ಟೆ ಪೂರ್ತಿಯಾಗಿ ತುಂಬಿದರೆ, ಏರ್ ಕಂಡಿಷನ್ಸ್ ರೂಮಿನಲ್ಲಿ ತಂಗಾಳಿಯು ಆಯಾಸ ತೀರಿಸುತ್ತಿದ್ದರೆ... ಪ್ರೇಮ, ಆಪ್ಯಾಯತೆ ಬೇಡವೆಂದರೂ ಹುಟ್ಟಿಕೊಳ್ಳುತ್ತವೆ. ಒಂದು ಕಡೆ ಹೊಟ್ಟೆ ಸುಡುತ್ತಿರುವಾಗ, ಹಣವೇ ಮುಖ್ಯ ಸಮಸ್ಯೆ ಆಗಿರುವಾಗ, ಈ ಆಪ್ಯಾಯತೆಗಳೆಲ್ಲಾ ಕಂಡುಬರದ ಜಾಗಕ್ಕೆ ಹೊರಟುಹೋಗುತ್ತವೆ. ಆಗ ಆ ಸ್ಥಾನವನ್ನು ಬೇಸರ, ಕಿರಿಕಿರಿ, ಕೋಪ ಭರ್ತಿ ಮಾಡುತ್ತವೆ."

"ಈ ಬಂಧುತ್ವ, ಆಪ್ಯಾಯತೆ ಮನುಷ್ಯ ತನ್ನ ಸಂಸ್ಕಾರದಿಂದ ಏರ್ಪಡಿಸಿಕೊಂಡಿರುವುವು. ಕೇವಲ ಹಸಿವಿನಿಂದ ಮನುಷ್ಯನು ಮೃಗವಾಗಿ ಬದಲಾಗುವುದೇನಾದರೂ ಸಂಭವಿಸಿದ ಪಕ್ಷದಲ್ಲಿ ಈ ಪ್ರಪಂಚದಲ್ಲಿ ಬಡವರೆಲ್ಲ ತಮ್ಮ ಸಂಸಾರಗಳೆಲ್ಲವನ್ನೂ ಬಿಸಾಡಿಬಿಟ್ಟಿರುತ್ತಿದ್ದರು."

"ಏನೋ ಕೂಡಿ ಇರಬೇಕು; ಆದ್ದರಿಂದ ಇರುತ್ತಾರೆ. ಆದರೆ ನಿಮಗೆ ಗೊತ್ತಿಲ್ಲ... ಗಂಡ ಹೆಂಡತಿಯರು, ಅಣ್ಣ ತಂಗಿಯರು ಪ್ರತಿ ದಿನವೂ ಎಂತಹ ಬದ್ಧವೈರಿಗಳಂತೆ ಹೊಡೆದಾಡುವರೆಂದು ನಿಮಗೆ ತಿಳಿಯದು. ಆ ಕೊಳಕು ಕೂಪದಲ್ಲಿ, ಆ ಕತ್ತಲ ಗುಹೆಯಲ್ಲಿ ಆಪ್ಯಾಯತೆ ಎನ್ನುವುದು ಹುಡುಕಿ ನೋಡಿದರೂ ಕಾಣಿಸುವುದಿಲ್ಲ."

"ಹಣವೇ ಆಪ್ಯಾಯತೆಯನ್ನು ವ್ಯಕ್ತಪಡಿಸುತ್ತದೆಂದು ನೀನೆಂದರೆ ನಾನು ಒಪ್ಪಿಕೊಳ್ಳುವುದಿಲ್ಲ."

View full details