Pro. Mallepuram G. Venkatesha
ಪಾತಳಿ
ಪಾತಳಿ
Publisher - ಶಂಬಾ ವಿಚಾರ ವೇದಿಕೆ
- Free Shipping Above ₹400
- Cash on Delivery (COD) Available*
Pages - 260
Type - Paperback
Couldn't load pickup availability
ಶಂಬಾ ಜೋಶಿಯವರು ತಮ್ಮ ಸಾಂಸ್ಕೃತಿಕ ವೈಚಾರಿಕ ಚಿಂತನೆಗಳಿಂದ ಭಾರತೀಯ ಸಾಂಸ್ಕೃತಿಕ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲಿದವರು. ಅವರ ಅಧ್ಯಯನದ ನೆಲೆಗಳಲ್ಲಿ ಕನ್ನಾಡ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಮತ್ತು ಮಾನವ ಸಂಸ್ಕೃತಿಯ ಅನುಕ್ರಮ ಬೆಳವಣಿಗೆಯಿದೆ. ಈ ಬೆಳವಣಿಗೆಯು ಅವರ ಅಧ್ಯಯನ ಮಾರ್ಗಕ್ಕೆ ಹೊಸ ಚೆಲುವನ್ನು ಪ್ರದಾನ ಮಾಡಿತು. ಅವರು ಸಂಕೇತಶಾಸ್ತ್ರ, ಇತಿಹಾಸಶಾಸ್ತ್ರ, ಭಾಷಾಶಾಸ್ತ್ರ, ಮನಃಶಾಸ್ತ್ರ ಮುಂತಾದುವುಗಳ ಬೆಳಕಿನಲ್ಲಿ ಕಂಡುಕೊಂಡ ಸಾಂಸ್ಕೃತಿಕ ಸತ್ಯಗಳು ಹಲವಾರು. ಇಂದು ಅವುಗಳ ಯುಕ್ತ ಅಧ್ಯಯನ ಆಗಬೇಕಾಗಿದೆ. ಅವರು ಮಂಡಿಸಿದ ವಿಚಾರಗಳ ಬೆಳಕಿಗೆ ನುಗ್ಗಿ ಆ 'ಸತ್ಯ'ಗಳನ್ನು ಕಂಡುಕೊಳ್ಳಬೇಕಾಗಿದೆ. ಇದು ಇನ್ನೂ ಮುಂದೆ ಸಾಗಬೇಕಾದ ದಾರಿ.
ಕಳೆದ ಅರವತ್ತು ವರ್ಷಗಳಲ್ಲಿ ಅವರ ಕೃತಿಗಳ ಬಗೆಗೆ, ಚಿಂತನೆಯ ಬಗೆಗೆ, ವೈಚಾರಿಕ ಆಕೃತಿಗಳ ಬಗೆಗೆ ಅಷ್ಟಿಷ್ಟು ಅಧ್ಯಯನಗಳು ನಡೆದಿವೆ. ಈ ಅಧ್ಯಯನ ಮತ್ತು ಪ್ರತಿಕ್ರಿಯೆಗಳು ಒಂದೇ ಬಗೆಯವಲ್ಲ; ಆದರೆ ನಡೆದಿರುವಷ್ಟು ಚಿಂತನೆ ಮತ್ತು ಅಧ್ಯಯನಗಳು ಉಪಯುಕ್ತವಾಗಿವೆ. ಈ ಅಧ್ಯಯನಗಳ ನೆಲೆಯು, ಆಲೂರು ವೆಂಕಟರಾಯರಿಂದ ಹಿಡಿದು ಈಚಿನ ಅನೇಕ ಯುವ ಲೇಖಕರವರೆಗೂ ವ್ಯಾಪಕವಾಗಿ ಹರಡಿದೆ. ಶಂಬಾ ಜೋಶಿಯವರ ಬಗೆಗೆ ವಿದ್ವತ್ ವಲಯವು ಪ್ರತಿಕ್ರಿಯಿಸಿದ ನೆಲೆಗಳನ್ನು ತಿಳಿಯಬಯಸುವವರಿಗೆ ಈ ಸಂಪುಟವು ಉಪಯುಕ್ತ ಆಕರವಾಗಬೇಕೆಂಬುದು ನಮ್ಮ ಆಸೆ. ಬರುವ 1996 ಶಂಬಾ ಅವರ ಶತಮಾನೋತ್ಸವದ ವರ್ಷ. ಆ ಉತ್ಸವಕ್ಕೆ 'ಬೆಳಕಿಂಡಿ'ಯಾಗಿ ಸಿದ್ಧಪಡಿಸಿದ ಅಧ್ಯಯನ ಸಂಪುಟವಿದು.
ಶಂಬಾ ವಿಚಾರ ವೇದಿಕೆ, ಬೆಂಗಳೂರು
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.