Smt.Ratnaramadas
ಪಾಕಶಾಸ್ತ್ರ
ಪಾಕಶಾಸ್ತ್ರ
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 380
Type - Paperback
Couldn't load pickup availability
ಕೃತಕೃತ್ಯರು
ಶ್ರೀಮತಿ ರತ್ನರಾಮದಾಸ್ರವರು ಸಂಪ್ರದಾಯಸ್ಥ ಮನೆತನದಿಂದ ಬಂದ ಸದ್ಗ್ರಹಿಣಿ. ಇವರು ಈಗ 75 ಸಂವತ್ಸರಗಳನ್ನು ಕಂಡು, ಜೀವನದಲ್ಲಿ ಕಷ್ಟ-ಸುಖಗಳನ್ನು ಸರಿಸಮಾನವಾಗಿ ಅನುಭವಿಸಿ ಸಾರ್ಥಕ ಬದುಕನ್ನು ಕಂಡು ಕೊಂಡವರು.
ಪತಿಗೆ ತಕ್ಕ ಸದ್ಗ್ರಹಸ್ತ ಪತ್ನಿಯಾಗಿ, ಮಕ್ಕಳಿಗೆ ವಾತ್ಸಲ್ಯಮಯಿ ತಾಯಿಯಾಗಿ, ಮಕ್ಕಳಿಗೆ ಕಾಲಕಾಲಕ್ಕೆ ಸರಿಯಾದ ಸಂಸ್ಕಾರಗಳನ್ನು ನೀಡಿ, ಅವರನ್ನು ತಿದ್ದಿ-ತೀಡಿ, ಸಮಾಜದಲ್ಲಿ ಗೌರವಯುತವಾಗಿ ಬಾಳುವಂತೆ ಸುಸಂಸ್ಕೃತರನ್ನಾಗಿ ಮಾಡಿದ ಮೊದಲ ಗುರುವಾಗಿದ್ದಾರೆ.
ಎಷ್ಟೋ ವರ್ಷಗಳಿಂದ ಪರಿತಪಿಸುತ್ತಿದ್ದ ಸಾಹಿತ್ಯಾಭಿರುಚಿಯು ತಮ್ಮ 70ನೇ ವಯಸ್ಸಿನಲ್ಲಿ ಭುಗಿಲೆಬ್ಬಿದುದು ಕಾಕತಾಳೀಯ. ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಮಾಡಿ ತಮ್ಮ ಅನುಭವ – ಸಂಗ್ರಹಗಳಿಂದ ಕ್ರೋಡೀಕರಿಸಿ ನಿತ್ಯ ಅಡುಗೆಗೆ ಸಂಬಂದಿತ "ಪಾಕಶಾಸ್ತ್ರ" ಎಂಬ ಕೃತಿಯನ್ನು ಪುಸ್ತಕ ರೂಪದಲ್ಲಿ ತರಲು ಪ್ರಯತ್ನಿಸಿ ಅದರಲ್ಲಿ ಸಫಲರಾಗಿ-ಯಶಸ್ವಿಯಾಗಿದ್ದಾರೆ.
ಯಾವುದೇ ಕ್ಲಿಷ್ಟ ಪದಗಳನ್ನು-ಶಬ್ದಗಳನ್ನು ಎಲ್ಲಿಯೂ ಬಳಸದೇ ಅತ್ಯಂತ ಸರಳವಾಗಿ ನೇರವಾಗಿ ಎಲ್ಲರ ಮನಸ್ಸಿಗೆ ತಲುಪುವಂತೆ ಕೃತಿಯನ್ನು ರಚಿಸಿರುವ ಶ್ರೀಮತಿಯವರು ತಮ್ಮ ಮೊದಲನೇ ಪ್ರಯತ್ನದಲ್ಲಿಯೇ ಓದುಗರ ಮೆಚ್ಚುಗೆಗೆ ಪಾತ್ರರಾಗುವುದರಲ್ಲಿ ಸಂಶಯವೇ ಇಲ್ಲ.
"ಪಾಕಶಾಸ್ತ್ರ"- ಪಾರಂಪರಿಕ ಸವಿರುಚಿಯ ಸಸ್ಯಹಾರಿ ಸಾಂಪ್ರದಾಯಿಕ ಸರಳ ಅಡುಗೆಗಳಿಂದ ಕೂಡಿರುವ ಈ ಕೃತಿಯಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಭೋಜನ, ಸಾಯಂಕಾಲದ ತಿಂಡಿ, ಪಾನೀಯಗಳು, ವಿಶೇಷ ಭಕ್ಷಗಳು ಹಾಗೂ ರಾತ್ರಿಯ ಭೋಜನಗಳಿಗನುಸಾರವಾಗಿ ವಿವಿಧ ರೀತಿಯ ಹತ್ತು-ಹಲವು ಬಗೆಗಳ ಅಡುಗೆಗಳ ವಿಧಾನಗಳನ್ನು ಪರಿಚಯಿಸಿ ಪಾಕಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ.
ಗೃಹಿಣಿಯಿಂದಾದಿಯಾಗಿ ಎಲ್ಲ ವಯೋಮಾನದವರಿಗೂ ಪಾಕ ಪ್ರವೀಣರಿಗೂ ಉಪಯುಕ್ತವಾಗಿರುವ ಈ ಪುಸ್ತಕವನ್ನು ಆಸಕ್ತರು ಕೊಂಡು ಅಕ್ಕರೆಯಿಂದ ಸ್ವೀಕರಿಸಿ ಪ್ರಯೋಜವನ್ನು ಪಡೆದಾಗ ಕೃತಿಕಾರರ ಶ್ರಮವು ಸಾರ್ಥಕಗೊಳ್ಳುತ್ತದೆ.
ಅತ್ಯಂತ ಅಚ್ಚುಕಟ್ಟಾಗಿ ಈ ಬೃಹತ್ ಕೃತಿಯನ್ನು ರಚಿಸಿ-ಪ್ರಕಾಶಿಸಿ ಲೋಕಾರ್ಪಣೆ ಮಾಡುತ್ತಿರುವ ಶ್ರೀಮತಿ ರತ್ನರಾಮದಾಸ್ರವರು ಅಭಿನಂದನಾರ್ಹರು.
-ಕೆ.ಸಿ. ಪ್ರಭಾಕರ್
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.