Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಗ್ರಾಮೀಣ ಪರಿಸರದ ಮಕ್ಕಳ ಹಾಡು, ಹಾಡಿನ ತುಣುಕುಗಳ ಬಗೆ ಆದಷ್ಟೂ ರಂಜನೆಯಲ್ಲಿ ಪರ್ಯವಸಾನಗೊಳ್ಳುವಲ್ಲಿಗೇ ನೇರಗೊಂಡುದು (ಜನಪದ ಮಕ್ಕಳ ಸಾಹಿತ್ಯವನ್ನ ವ್ಯವಸ್ಥಿತವಾಗಿ ನೋಡಿಲ್ಲವೆಂಬುದನ್ನು ಇಲ್ಲಿ ಹೇಳಲೇಬೇಕು). ಅಲ್ಲಿ ಇಂದಿನ ನಾಗರಿಕ ಮನಸ್ಸು ಕಂಡುಕೊಳ್ಳುತ್ತಿರುವ ಸೂಕ್ಷ್ಮ ಸಂವೇದನೆಗಳು ಕಾಣವು, ಕೇವಲ ಹಾಸ್ಯವಲ್ಲದ ಮನಸ್ಸಿನ ಹಲವಂದದ ಭಾವದ ಗೊತ್ತುಗಳು ಈಗೆಲ್ಲ ಕಾಣಿಸಿಕೊಳ್ಳುತ್ತಿರುವ ಹಾಗೆ ಜನಪದದಲ್ಲಿ ಕಾಣದು. ಬದುಕಿನ ವಾಸ್ತವ ಅಲ್ಲಿ ಹಣಿಕಿಹಾಕುವುದು ಆದಷ್ಟೂ ಹಾಸ್ಯ, ವ್ಯಂಗ್ಯ, ಮೂದಲಿಕೆ ಮುಂತಾಗಿಯೇ ಎಂದು ಕಾಣುತ್ತದೆ. ತಿರುಮಲೇಶರು ಜನಪದ ಮಾದರಿಯನ್ನೇ ವಿಶೇಷವಾಗಿ ಕ್ಯಾನ್ವಾಸಾಗಿ ಹೊಂದಿದರೂ ತಮ್ಮತನವನ್ನ ಕಾಣಿಸಿ ಹೊಸತಿನ ಅನುಭವ ನೀಡುತ್ತಾರೆ.
- ಆನಂದ ಪಾಟೀಲ (ಮುನ್ನುಡಿಯಿಂದ)
Be the first to know about new collections and special offers.