Skip to product information
1 of 1

Mahabala Seethalabhavi

ನೂರೆಂಟು ಸುಭಾಷಿತಗಳು

ನೂರೆಂಟು ಸುಭಾಷಿತಗಳು

Publisher - ಅಂಕಿತ ಪುಸ್ತಕ

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಸುಭಾಷಿತಗಳ ಮಸ್ತಕಗಳು ಬೇಕಾದಷ್ಟು ಸಿಗುತ್ತವೆ. ಆದರೆ ಅವುಗಳ ಅರ್ಥವನ್ನು ಇವತ್ತಿನ ಸಂದರ್ಭಕ್ಕೆ ತಕ್ಕಂತೆ ಹೊಳೆಯಿಸಿಕೊಡುವವರು ಕಡಿಮೆ, ತರುಣ ಮಹಾಬಲ ಸೀತಾಳಭಾವಿ ಅಂಥ ಕೆಲಸ ಮಾಡಿದ್ದಾನೆ. ಸುಭಾಷಿತಗಳಿಗೆ ಆಧುನಿಕ ಭಾಷ್ಯ ಬರೆದಿದ್ದಾನೆ. ಸುಭಾಷಿತಗಳು ತಮ್ಮ ಅರ್ಥ ವಿಸ್ತಾರವನ್ನು ಇಡಿಯಾಗಿ ಬಿಟ್ಟು ಕೊಡುವಂತೆ ಮಾಡಿದ್ದಾನೆ. ಸುಮ್ಮನೆ ಬೇಸರವಾದಾಗ, ಏನೂ ತೋಚದೇ ಇದ್ದಾಗ, ನನ್ನ ಪಾಡಿಗೆ ನಾನಿರಬೇಕು ಅನ್ನಿಸಿದಾಗ, ಏನಾದರೂ ಹೊಳೆಯಲಿ ಎಂದು ಚಡಪಡಿಸುವಾಗ ನಾನು ಮಹಾಬಲ ಸಂಪಾದಿಸಿದ ಸುಭಾಷಿತಗಳನ್ನು ಕೈಗೆತ್ತಿಕೊಳ್ಳುತ್ತೇನೆ.

ಪತ್ರಿಕೋದ್ಯಮದ ಒಳಗಿದ್ದುಕೊಂಡು ಅದರ ಮಿತಿಗಳನ್ನು ಮೀರಲು ಯತ್ನಿಸುತ್ತಿರುವ ಉತ್ಸಾಹಿಗಳ ಪಟ್ಟಿಯಲ್ಲಿ ಮಹಾಬಲ ಮೊದಮೊದಲಿಗಿದ್ದಾನೆ. ವಿಚಕ್ಷಣೆ ಮತ್ತು ಪ್ರತ್ಯುತ್ಪನ್ನಮತಿಯ ಜೊತೆ ಹದವಾದ ಹಾಸ್ಯ ಪ್ರಜ್ಞೆಯೂ ಸೇರಿಕೊಂಡಿರುವ ಮಹಾಬಲನ ಸುಭಾಷಿತಗಳ ಸಂಗ್ರಹ, ಎಂದೋ ಬರೆದಿಟ್ಟ ಸತ್ಯವಾಕ್ಯದ ಇಂದಿನ ಗಳಿಗೆಗಳನ್ನು ಬೆಸೆಯುವ ಸೇತುವೆಯಾಗಿ ಇಷ್ಟವಾಗುತ್ತದೆ. ಮುಖ್ಯವಾಗುತ್ತದೆ.

– ಜೋಗಿ
View full details