ನಿಲ್ದಾಣಗಳ ನಾದಲೀಲೆ

ನಿಲ್ದಾಣಗಳ ನಾದಲೀಲೆ

Rs. 195.00
Skip to product information
ನಿಲ್ದಾಣಗಳ ನಾದಲೀಲೆ
ನಿಲ್ದಾಣಗಳ ನಾದಲೀಲೆ
Sudhakara Devadiga
Publisher - ಅಮೂಲ್ಯ ಪುಸ್ತಕ
Type - Paperback
Pages - 140
- Free Shipping Above ₹400

- Cash on Delivery (COD) Available*
Rs. 195.00
Shipping calculated at checkout.

Pickup available at Harivu Books New Shop

Usually ready in 24 hours

View store information

ನಿಲ್ದಾಣಗಳ ನಾದಲೀಲೆ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಸಮಚಿತ್ತದ ವಿಮರ್ಶಕರಾದ ಡಾ. ಸುಧಾಕರ ದೇವಾಡಿಗ ಅವರ ಪ್ರಬಂಧಗಳು ಸ್ವವಿಮರ್ಶೆ, ಸ್ವಲಯದಿಂದ ಕೂಡಿವೆ. ದೈನಂದಿನ ಬದುಕಿನ ಒಳ ವಿನ್ಯಾಸವನ್ನು ಲವಲವಿಕೆಯಿಂದ ಕಟ್ಟುತ್ತಾ, ಅಂತಃಕರಣ ಮಿಡಿಯುವ 'ಪ್ರಬಂಧ ನುಡಿಗಟ್ಟು'ವೊಂದನ್ನು ಆಕೃತಿಯಾಗಿಸಿದ್ದಾರೆ. ಸಾಮಾಜಿಕವಾಗಿ ಅಮಾನ್ಯಕ್ಕೊಳಗಾದ 'ಜೀವಲಯ'ಗಳನ್ನು ಒಡಲೊಳಗೆ ತೆಗೆದುಕೊಂಡಿದ್ದಾರೆ. ಇಲಿ, ಕೊಡೆ, ಹೂ, ಪುಸ್ತಕ, ದೂಳು, ಮೊಬೈಲ್, ಬಸ್ ನಿಲ್ದಾಣಗಳು ಈ ಪ್ರಬಂಧಗಳಲ್ಲಿ ಹೊಸ ರೂಪ ಪಡೆದಿವೆ. ಇವು ಬದುಕಿನೊಂದಿಗೆ ಸಂಯೋಗಗೊಂಡು ಓದುಗನಲ್ಲಿ ಮಾನವೀಯತೆಯ ಸೆಳೆತವನ್ನು ಸೃಷ್ಟಿಸುತ್ತವೆ.

ಪ್ರಬಂಧ ಪರಂಪರೆಯೊಂದಿಗೆ ನುಡಿವ ಇವು ಗಾಳಿಯಲ್ಲಿ ತೇಲುವ ನುಡಿಗಳಾಗದೆ, ಜೀವ ಚೈತನ್ಯದಿಂದ ಮೈದಾಳಿವೆ. 'ಜೀವನ ಶ್ರದ್ದೆ'ಯನ್ನೇ ತತ್ವವಾಗಿಸಿಕೊಂಡು ಲೋಕವನ್ನು ಒಳಗು ಮಾಡಿಕೊಳ್ಳುತ್ತವೆ. ಕಳೆದುಹೋದ ಜಗತ್ತನ್ನು ಹಳಹಳಿಕೆಯಿಂದ ನೋಡದೆ ಬದಲಾದ ವಾಸ್ತವವನ್ನು ಎದುರಾಗಿಸುತ್ತವೆ. ಮನುಷ್ಯನ ಸ್ವಭಾವಗಳ ಸ್ವಾನುಭೂತಿಯ ಜಿಜ್ಞಾಸೆ ಪ್ರಬಂಧಗಳ ಕೇಂದ್ರ ಬಿತ್ತಿ. ಸಹಜವಾದ ಭಾಷಿಕ ವಿನ್ಯಾಸ ಪ್ರಬಂಧಗಳ ಜೀವಾಳವಾಗಿದೆ. ಗಂಭೀರವಾಗಿ ಹರಿಯುತ್ತಲೇ ನವಿರಾದ ನಾದಮಯವೂ ತುಂಬಿಕೊಂಡಿವೆ. ಸರಳ ಸಾತತ್ಯದೊಂದಿಗೆ ಚಲಿಸುವ ಈ ಪ್ರಬಂಧಗಳು ಹೊಸ ಬನಿಯನ್ನು ನೀಡುತ್ತವೆ.

- ಹಳೆಮನೆ ರಾಜಶೇಖರ

You may also like

Subscribe to our emails

Be the first to know about new collections and special offers.