ಇದು ಸೈಕಾಲಜಿ ಪುಸ್ತಕ, ಆದರೆ ಸರಳ, ತಮಾಷೆಯ, ವೈಜ್ಞಾನಿಕ ಮಾಹಿತಿಗಳು ಇಲ್ಲಿವೆ.
• ಕೈನೋವಿಗೆ ಸುಲಭದ ಕನ್ನಡಿ ಚಿಕಿತ್ಸೆ ಇದೆ; ವಾಸಿ ಖಾತ್ರಿನಾ? •'ಪುರುಷ ಪರಿಮಳ'ವನ್ನು ಸೇರಿಸಿ ಸೆಂಟ್ ತಯಾರಿಸಿದ್ದು ಹೇಗೆ? • ನಮ್ಮ ಹೊಟ್ಟೆಯೊಳಗಿನ ಮಿದುಳು ಹೇಗೆ ಕೆಲಸ ಮಾಡುತ್ತದೆ? • ಕಂಡದ್ದನ್ನೆಲ್ಲ ಖರೀದಿ ಮಾಡುವ 'ಓನಿಯೋಮೇನಿಯಾ' ಕಾಯಿಲೆಗಳ ಲಕ್ಷಣ ಏನೇನು? • ಮೂಕಪ್ರಾಣಿಗಳು ಸಂತಾನವೃದ್ಧಿಗಾಗಿ ಮಾತ್ರ ಮೈಥುನಕ್ಕೆ ತೊಡಗುತ್ತವೆ; ಮನುಷ್ಯರಿಗೆ 237 ಇತರ ಕಾರಣಗಳಿರುತ್ತವೆ ಅವು ಎಂತೆಂಥವು? • ತಲೆಯಲ್ಲಿ ಭಕ್ತಿರಸ ಹುಟ್ಟಿಸಬಲ್ಲ 'ಗಾಡ್ ಹೆಲೈಟ್' ಹಿಂದಿನ ರಹಸ್ಯ ಏನು? • ಮನೋರೋಗಕ್ಕೂ ಮನೆಮದ್ದು ಉಂಟಂತಲ್ಲ ಮಾರಾಯ್ರೆ! ಉಂಟು, ಓದಿ ನೋಡಿ.