Veena Bannanje
ನನ್ನ ಪಿತಾಮಹ
ನನ್ನ ಪಿತಾಮಹ
Publisher -
- Free Shipping Above ₹300
- Cash on Delivery (COD) Available
Pages - 80
Type - Paperback
Couldn't load pickup availability
ಎದೆಯಲ್ಲಿಟ್ಟುಕೊಂಡ. ಎಲ್ಲರೂ ಎಚ್ಚರ ತಪ್ಪುವ ಹೊತ್ತು ರಾತ್ರಿ ಇವನಿಗೆ ಬೆಳಕು. ಮದುವೆಯ ಗಂಧಾಕ್ಷತೆಯಿನ್ನೂ ತಲೆಯಿಂದ ಇಳಿದಿಲ್ಲ, ಸತ್ಯಭಾಮೆ ಮನೆ ತುಂಬಲು ಹೊಸ್ತಿಲ ಒಳಗೆ ಕಾಲಿಟ್ಟಿದ್ದಾಳೆ. ಇವನು ಜಗ ತುಂಬಲು ಹೊಸ್ತಿಲು ದಾಟಿದ. ಕೃಷ್ಣ ಮಠಕ್ಕೆ ನಿತ್ಯ ಹೋದವನಂತೆ ಹೊರಟು ನಾರಾಯಣ ಮುಟ್ಟಿದ್ದು ಧಾರವಾಡ...
ಕಾಲ ಯಾರನ್ನೂ ಕೇಳುವುದಿಲ್ಲ. ನಿಲ್ಲುವ ಮಾತು ಕೂಡ ಸುಳ್ಳು. ಆದರೆ ಕಾಲದೊಡನೆ ಬೆಳೆಯುವವರು ವಿರಳ. ಏರುವ ಅವನ ಗತಿಯಲ್ಲಿ ಬೆಳೆಯಬೇಕು. ಅದು ಕೆಲವರಿಗೆ ಮಾತ್ರ ಸಾಧ್ಯ. ನಾರಾಯಣ ಬೆಳೆಯುತ್ತಿದ್ದ. ಉಡಿಗೆ ತಾಯಿ ಹಾಕಿಕೊಳ್ಳುವುದು ಬೆಳೆಯಲಿ ಎಂದು. ಗುರು ಕೂಡ ಹಾಗೆ, ಅಂತಃಕರಣದ ಸರ್ವಸ್ವ ಧಾರೆ ಎರೆದು ನಡೆಸಿದರು ವಿರೂಪಾಕ್ಷ ಶಾಸ್ತ್ರಿಗಳು, ಕತ್ತಲೆ ಕಳೆಯಲಿಕ್ಕೆ ಎಷ್ಟು ಹೊತ್ತು? ಮೆಲ್ಲಗೆ ಸವರಿದ ಗುರುವಿನ ಬೆರಳ ಸ್ಪರ್ಶ ಸಾಕು. ನಾರಾಯಣನ ಸಮರ್ಪಣೆ ಹಾಗಿತ್ತು. ಅವನು ಒಳಗೆ ಹೊಳೆಯುತ್ತಿದ್ದ. ಹೊರಗೆ ಏರುಜವ್ವನದ ಬೆಳೆಯೂ ಪ್ರತಿಫಲಿಸುತ್ತಿತ್ತು. ಮುಖದಲ್ಲಿ ಬೆಳೆದ ಗಡ್ಡ ಮೀಸೆಗಳು ಅವನನ್ನು ಋಷಿಯಂತೆ ಹೊಳೆಯಿಸಿದವು. ನಾರಾಯಣ ಒಳಹೊರಗೆ ಬೆಳೆದ....
Share


Subscribe to our emails
Subscribe to our mailing list for insider news, product launches, and more.