ನಮ್ಮದೇ ಕಥೆಗಳು

ನಮ್ಮದೇ ಕಥೆಗಳು

Rs. 190.00
Skip to product information
ನಮ್ಮದೇ ಕಥೆಗಳು
ನಮ್ಮದೇ ಕಥೆಗಳು
Krishna Bhat Aladangadi
Publisher - ವಿಸ್ತಾರ ಪ್ರಕಾಶನ
Type - Paperback
Pages - 152
- Free Shipping Above ₹400

- Cash on Delivery (COD) Available*
Rs. 190.00
Shipping calculated at checkout.
ಈ ಪುಸ್ತಕದಲ್ಲಿರುವ ಕಥೆಗಳನ್ನು ಇವತ್ತೇ ಓದಿ ಮುಗಿಸಬೇಕು ಎಂದೇನಿಲ್ಲ. ಯಾವತ್ತು ಬೇಕಾದರೂ ಓದಬಹುದು, ಖುಷಿಯಾದಾಗ ಓದಬಹುದು, ಏನೋ ಖಾಲಿ ಖಾಲಿ ಅನಿಸಿದಾಗ ಓದಬಹುದು, ತುಂಬ ಬೇಸರವಾದಾಗಲೂ ಓದಬಹುದು. ಈ ಪುಸ್ತಕದಲ್ಲಿರುವ ಅದೇ ಕಥೆ ಓದಬೇಕು, ಇದೇ ಕಥೆ ಓದಬೇಕು ಅಂತಾನೂ ಇಲ್ಲ. ಸುಮ್ಮನೆ ಕಣ್ಮುಚ್ಚಿ ಒಂದು ಪುಟ ತೆರೆದು ಒಂದು ಕಥೆ ಓದಿದರೂ ಸಾಕು, ಖುಷಿಯಲ್ಲಿದ್ದ ಮನಸು ಇನ್ನಷ್ಟು ಪ್ರಫುಲ್ಲಿತವಾಗುತ್ತದೆ. ನೋವು, ಸಂಕಟಗಳು ಕಾಡುತ್ತಿದ್ದರೆ ಗಾಢವಾದ ನಿಟ್ಟುಸಿರಿನೊಂದಿಗೆ ದೊಡ್ಡ ನಿರಾಳತೆ ನಿಮ್ಮದಾಗುತ್ತದೆ. ಕೆಲವೊಮ್ಮೆ ಗಂಟಲು ಗದ್ಗದಗೊಂಡು ಕಣ್ಣಲ್ಲೊಂದು ಸಣ್ಣ ಹನಿ ಮೂಡಬಹುದು.

ಈ ಪುಸ್ತಕದ ಯಾವುದೋ ಒಂದು ಕಥೆ ಓದಿದಾಗ ನಿಮಗೆ ನಿಮ್ಮ ಅಮ್ಮ ನೆನಪಾಗಬಹುದು, ಅಪ್ಪನ ಕಷ್ಟದ ಅರಿವಾಗಬಹುದು, ಹೆಂಡತಿಯ ಮನಸು ಅರ್ಥವಾಗಬಹುದು, ಗಂಡನ ಒತ್ತಡ ಗೊತ್ತಾಗಬಹುದು. ನಮ್ಮ ಮಕ್ಕಳಿಗೆ ನಿಜವಾಗಿಯೂ ಬೇಕಾಗಿರುವುದೇನು ಎನ್ನುವುದು ನಿಮಗೆ ತಿಳಿಯಬಹುದು.

ಈ ಕಥೆಗಳನ್ನು ಓದುತ್ತಾ ಕಲವರಿಗೆ ಇದು ನನ್ನದೇ ಕಥೆ ಅನಿಸಬಹುದು, ಕಲವರಿಗೆ ನಾನೂ ಹೀಗಾಗಬೇಕಲ್ಲ ಅನಿಸಬಹುದು. ಪಕ್ಕದಲ್ಲೇ ಇರುವ ಯಾರದೋ ಹೋಲಿಕೆ ಕಾಣಬಹುದು. ಒಟ್ಟಿನಲ್ಲಿ ಈ ಕಥೆಗಳನ್ನು ಓದಿದ ಬಳಿಕ ಯಾರೂ ನಾವು ನಾವಾಗಿ ಇರುವುದಂತೂ ಇಲ್ಲ. ಒಂದು ಸಣ್ಣ ಕದಲಿಕೆ, ದೊಡ್ಡ ನಿರಾಳತೆ, ಏನಾದರೂ ಮಾಡಲೇಬೇಕು ಎನ್ನುವ ಸಣ್ಣ ಪಾಸಿಟೀವ್ ಯೋಚನೆ ಮೂಡುವುದು ನಿಶ್ಚಿತ.

You may also like

Subscribe to our emails

Be the first to know about new collections and special offers.