Harshakumar Kugve
ನಮ್ಮ ಸಂವಿಧಾನ
ನಮ್ಮ ಸಂವಿಧಾನ
Publisher -
- Free Shipping Above ₹400
- Cash on Delivery (COD) Available*
Pages - 146
Type - Paperback
Couldn't load pickup availability
2000 ವರ್ಷಗಳ ಕಾಲ ದೇಶದ ನಾನಾ ಭಾಗಗಳಲ್ಲಿ ಮನುಷ್ಯತಿಯೇ ಅಲಿಖಿತ, ಅಘೋಷಿತ ಸಂವಿಧಾನವಾಗಿತ್ತು. ದೇಶದ ಪುರೋಹಿತಶಾಹಿಗಳು ರಚಿಸಿ ಸ್ಥಾಪಿಸಿದ್ದ ಮನುಸ್ಮೃತಿ ವಿಧಿಸಿದ್ದ ಕಟ್ಟಳೆಗಳ ಪರಿಣಾಮವಾಗಿ ಚಾತುರ್ವಣ್ರ ವ್ಯವಸ್ಥೆ ಸಮಾಜದ ಭಾಗವಾಗಿ ಕಟ್ಟಳೆಗಳನ್ನು ವಿಧಿಸಿತ್ತು. ಅದರಲ್ಲಿ ನಾಲ್ಕನೆಯ ವರ್ಣವಾಗಿದ್ದ ಶೂದ್ರರು ಹಾಗೂ ವರ್ಣವ್ಯವಸ್ಥೆಯಿಂದ ಆಚೆ ಎಸೆಯಲ್ಪಟ್ಟಿದ್ದ ಪಂಚಮರೆನಿಸಿಕೊಂಡಿದ್ದ ಸಮುದಾಯಗಳ ಜನರು 'ಅಸ್ಪೃಶ್ಯತೆಯ' ದಿನನಿತ್ಯ ನರಕಸದೃಶ ಯಾತನೆಯಲ್ಲಿ ಬದುಕುವ ಪರಿಸ್ಥಿತ ಉಂಟಾಯಿತು. ಮಹಿಳೆಯರ ಬದುಕು ನರಕಸದೃಶವಾಗಿತ್ತು. ಈ ಜನರು ಗೌರವದ ದುಡಿಮೆ ಮಾಡುವಂತಿರಲಿಲ್ಲ, ಭೂಮಿ ಹೊಂದುವಂತಿಲ್ಲ, ಶಿಕ್ಷಣ ಪಡೆಯುವಂತಿಲ್ಲ, ಆಡಳಿತ ನಡೆಸುವಂತಿಲ್ಲ, ಸಮಾಜದ ಇತರರ ಎದುರು ತಲೆ ಎತ್ತಿ ನಡೆಯುವಂತಿಲ್ಲ, ಒಳ್ಳೆಯ ಸೀರೆ ಉಡುವಂತಿಲ್ಲ, ಉತ್ತಮ ಕುಪ್ಪಸ ತೊಡುವಂತಿಲ್ಲ, ಈ ಗಂಡಸರು ಪಂಚೆ ಎತ್ತಿಕಟ್ಟುವಂತಿಲ್ಲ, ಕಾಲಿಗೆ ಒಳ್ಳೆಯ ಚಪ್ಪಲಿ ಹಾಕುವಂತಿಲ್ಲ, ಕುರ್ಚಿಯಲ್ಲಿ ಕೂರುವಂತಿಲ್ಲ, ಇವರ ನೆರಳೂ ಸವರ್ಣೀಯರ ಮೇಲೆ ಬೀಳುವಂತಿಲ್ಲ..!!
ಎರಡು ಸಾವಿರ ವರ್ಷಗಳ ಕಾಲ ಹೀಗೆ ಬದುಕಿದ್ದ ಈ ಭಾರತದೇಶ ಕೇವಲ ಆರು-ಏಳು ದಶಕಗಳಲ್ಲೇ ಸಾಧಿಸಿರುವ ಪರಿವರ್ತನೆಯನ್ನೊಮ್ಮೆ ಸುಮ್ಮನೇ ಅವಲೋಕಿಸಿ. ದೇಶದ ಕೋಟ್ಯಂತರ ನಾಗರಿಕರಲ್ಲಿ ಹೊಸ ಸಂಚಲನ ಮೂಡಿಸಿ, ಹೊಸ ಭರವಸೆ ಹುಟ್ಟುಹಾಕಿ, ಸೋತುಸುಣ್ಣವಾಗಿದ್ದ ಜನರಲ್ಲಿ ಹೊಸಹೊಸ ಕನಸುಗಳು ಹುಟ್ಟಲು ಕಾರಣವಾದ ಈ ನಮ್ಮ 'ಸಂವಿಧಾನ" ಒಂದು ಅಸಾಮಾನ್ಯ ಗ್ರಂಥ ಹಾಗ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.