Title : Nakondla Naku, Collection of Essays, Writer : Nalini T.Bheemappa, Publisher : Sahityaloka  Publications.

ನಾಕೊಂದ್ಲ ನಾಕು...!

Rs. 195.00
Skip to product information
Title : Nakondla Naku, Collection of Essays, Writer : Nalini T.Bheemappa, Publisher : Sahityaloka  Publications.
ನಾಕೊಂದ್ಲ ನಾಕು...!
Nalini T. Bheemappa
Publisher - ಸಾಹಿತ್ಯ ಲೋಕ ಪ್ರಕಾಶನ
Type - Paperback
Pages - 152
- Free Shipping Above ₹400

- Cash on Delivery (COD) Available*
Rs. 195.00
Shipping calculated at checkout.

Pickup available at Harivu Books New Shop

Usually ready in 24 hours

View store information

ನಾಕೊಂದ್ಲ ನಾಕು...!

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ನಾವು ಸಾಮಾನ್ಯವೆಂದುಕೊಳ್ಳುವ ಅನೇಕ ಸನ್ನಿವೇಶಗಳಲ್ಲಿ ನಳಿನಿಯವರು ತಮ್ಮ ಮಂತ್ರದಂಡದಿಂದ ಹಾಸ್ಯವನ್ನು ಕೊನರಿಸುವ ರೀತಿ ಎಂಥವರನ್ನೂ ಆಕರ್ಷಿಸುತ್ತದೆ. ಇಲ್ಲಿನ ಹೆಚ್ಚಿನ ಬರಹಗಳು ಬಹುತೇಕ ನಮ್ಮೆಲ್ಲರ ಅನುಭವಗಳೂ ಆಗಿರುವುದರಿಂದ ಅವರು ಓದುಗರೊಂದಿಗೆ ಆತ್ಮೀಯತೆ ಸಾಧಿಸುತ್ತಾರೆ.

ಪ್ರಸ್ತುತ ಸಂಕಲನದಲ್ಲಿ ಎಲ್ಲಾ ಲೇಖನಗಳೂ ಶುದ್ಧ ಮನರಂಜನೆ ಒದಗಿಸುವಂಥವೇ. ನಮ್ಮ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುತ್ತಾ ಅದರ ನಿವಾರಣೆಯ ದಾರಿಗಳನ್ನು ಸೂಚ್ಯವಾಗಿ ಹೇಳುತ್ತವೆ. ದೊಡ್ಡ ಪ್ರಮಾಣದಲ್ಲಿ ಸತತವಾಗಿ ಬರೆದರೂ ಗುಣಮಟ್ಟ ಕೆಡದಂತೆ ನೋಡಿಕೊಂಡಿರುವುದು ನಳಿನಿಯವರ ಹೆಚ್ಚುಗಾರಿಕೆ. ಪರಿಸ್ಥಿತಿಯಿಂದಲೇ ಹೊಮ್ಮುವ ಹಾಸ್ಯ ತನ್ನಿಂದ ತಾನೇ ತನ್ನ ಸುತ್ತೆಲ್ಲ ಬೆಳಕನ್ನು ಚೆಲ್ಲುವಂತೆ ಇವರ ಹಾಸ್ಯ ಸಹಜವಾಗಿ ಅರಳುವ ಗುಣವುಳ್ಳದ್ದು.

ಹೀಗೆ ಧಾರವಾಡದ ಕುಸುಮವೊಂದು ನಗೆ ಮುಗುಳು ಬಿರಿದು ತನ್ನ ಕಂಪನ್ನು ಎಲ್ಲೆಡೆ ಪಸರಿಸುತ್ತಿರುವ ಬಗೆ ನಿಜಕ್ಕೂ ವಿಸ್ಮಯಕಾರಿ. ನಳಿನಿ ಅವರು ದೈನಂದಿನ ಆಗುಹೋಗುಗಳಿಗೆ ಸ್ಪಂದಿಸುವ ರೀತಿ ತುಂಬಾ ತಾಜಾ. ಆದ್ದರಿಂದಲೇ ಅದರಲ್ಲಿ ಹೊಸತನವಿದೆ, ನೈಜತೆ ಇದೆ. ಲೇಖಕಿಯ ಬರವಣಿಗೆಯ ಲವಲವಿಕೆ ಎಂದೂ ಮಾಸದಿರಲಿ. ಬಹಳ ಕಾಲ ಇಂತಹ ನಗೆ ಬಗ್ಗೆಗಳು ನಮ್ಮ ಮಧ್ಯೆ ಚಿಮ್ಮುತ್ತಾ ಜೀವನವನ್ನು ಹಸಿರಾಗಿಡಲಿ ಎಂದು ಹಾರೈಸುವೆ.

-ಸುಮಾ ರಮೇಶ್

ಲೇಖಕಿ, ಹಾಸನ

You may also like

Subscribe to our emails

Be the first to know about new collections and special offers.