ಭಾರತೀಯ ಚಿತ್ರರಂಗದ ಅದ್ಭುತ ಹಾಸ್ಯ ನಟ, ಗಿನ್ನೆಸ್ ದಾಖಲೆ ಸರದಾರ ಪದ್ಮಶ್ರೀ ಡಾ. ಬ್ರಹ್ಮಾನಂದಂ ಅವರ ಬದುಕಿನ ರೋಚಕ ಪಯಣವನ್ನು ಅನಾವರಣಗೊಳಿಸುವ ಆತ್ಮಕಥೆ ಇದು. ತೆಲುಗಿನ ಮೂಲ ಕೃತಿಯನ್ನು ಖ್ಯಾತ ಹಿರಿಯ ಪತ್ರಕರ್ತ ಮತ್ತು ಲೇಖಕ ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ಅತ್ಯಂತ ಸೊಗಸಾಗಿ ಅನುವಾದಿಸಿದ್ದಾರೆ. ವಿಶ್ವವಾಣಿ ಪುಸ್ತಕ ಪ್ರಕಾಶನದಿಂದ ಈ ಕೃತಿ ಬೆಳಕು ಕಂಡಿದೆ.