Subscribe to our emails
Be the first to know about new collections and special offers.
ಕೆಲವರಿಗೆ ತನಗೆ ಅದು ಲಭ್ಯವಿಲ್ಲ ಎಂಬ ಕೊರಗು, ಲಭ್ಯವಿದ್ದವರನ್ನು ಕಂಡು ನಿಟ್ಟುಸಿರು. ಗರತಿಗೆ ಬಂಧನದಿಂದ ಹೊರಬಂದು ದುಡಿಯುವ ಹೆಣ್ಣಾಗಿ, ಸ್ವತಂತ್ರ ಪಕ್ಷಿಯಾಗಿ, ಸ್ವಾವಲಂಬಿಯಾಗುವ ಕನಸು. ದುಡಿಯುವ ಹೆಣ್ಣಿಗೆ ಪತಿಯ ಪ್ರೀತಿಯ ಚಿನ್ನದ ಪಂಜರದಲ್ಲಿ ಅರಗಿಣಿಯಾಗಿ, ಬೀದಿ ಕಾಮಣ್ಣರಿಂದ ಮುಕ್ತಿ ಪಡೆದು, ಉತ್ತಮ ಗೃಹಿಣಿಯಾಗಿ ಬಾಳುವ ಕನಸು. ಒಂದು ವರ್ಗದ ಹೆಣ್ಣಿಗೆ ಆಫೀಸು ಸ್ವರ್ಗವಾದರೆ, ಮತ್ತೊಂದು ವರ್ಗದ ಹೆಣ್ಣಿಗೆ ಮನೆಯೇ ಬೃಂದಾವನ. ಯಾವುದು ಹಿತ? ಒಟ್ಟಿನಲ್ಲಿ ಕಡಲೆ ಇದ್ದವನಿಗೆ ಹಲ್ಲಿಲ್ಲ, ಹಲ್ಲಿದ್ದವನಿಗೆ ಕಡಲೆ ಇಲ್ಲ. ದೂರದ ಬೆಟ್ಟ ನುಣ್ಣಗೆ. ಇದೇ ಬಾಳಿನ ಸತ್ಯ. ಕ್ಷಮ ಮತ್ತು ವಿಶಾಲಿ ಅದಕ್ಕೆ ಹೊರತೆ? ಹತ್ತಿರ ಹೋಗಿ ನೋಡಬೇಕಷ್ಟೆ.
Be the first to know about new collections and special offers.