Skip to product information
1 of 2

Dr. H. S. Sathyanarayana

ಮಾಸ್ತಿ ಜೀವನ ಚಿತ್ರಗಳು

ಮಾಸ್ತಿ ಜೀವನ ಚಿತ್ರಗಳು

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 108

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

'ಮಾಸ್ತಿ ಜೀವನ ಚಿತ್ರಗಳು' ಕೃತಿಯು ಆಧುನಿಕ ಕನ್ನಡ ಸಾಹಿತ್ಯವನ್ನು ತಮ್ಮ ಅನನ್ಯ ಪ್ರತಿಭಾ ಸಂಪತ್ತಿನಿಂದ ಪೊರೆದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಎಂಬ ಹಿರಿಯ ಜೀವದ ಬದುಕು-ಬರಹಗಳ ಹಲವು ಮಾದರಿಗಳನ್ನು ಸಮರ್ಥವಾಗಿ ಪರಿಚಯಿಸುವ ವಿಶಿಷ್ಟ ಹೊತ್ತಿಗೆಯಾಗಿದೆ. ಹೊಸ ತಲೆಮಾರಿನ ಓದುಗರಿಗೆ ಕಳೆದ ಶತಮಾನದುದ್ದಕ್ಕೂ ಕನ್ನಡ ಸಾರಸ್ವತಲೋಕವನ್ನು ತಮ್ಮ ಸ್ಟೋಪಜ್ಞ ಕಥನದ ಮೂಲಕ ಪ್ರಭಾವಿಸಿದ, ಬರಹದಂತೆಯೇ ದೊಡ್ಡ ಬದುಕನ್ನು ಬಾಳಿದ ಚೇತನವೊಂದರ ವ್ಯಕ್ತಿತ್ವವನ್ನು ಹಲವು ಆಯಾಮಗಳಲ್ಲಿ ಪರಿಚಯಿಸುವ ಈ ಕೃತಿಯನ್ನು ಅತ್ಯಂತ ಸ್ವಾರಸ್ಯಕರವಾಗಿ ಡಾ. ಎಚ್. ಎಸ್. ಸತ್ಯನಾರಾಯಣ ಅವರು ರಚಿಸಿದ್ದಾರೆ.

ಹಲವು ಆಯಾಮಗಳಿಂದ ಮಾಸ್ತಿಯವರ ಧೀಮಂತ ಬದುಕನ್ನು ಅರಿಯಲು ಈ ಕೃತಿ ಮಾರ್ಗದರ್ಶಕವಾಗಿದೆ. ಸರಳ-ಸುಲಲಿತ ಭಾಷೆಯ ಬಳಕೆಯಿಂದ ಸೊಗಯಿಸಿರುವ ಆಯಸ್ಕಾಂತೀಯ ಗುಣದ ಇಲ್ಲಿನ ಬರವಣಿಗೆ ಓದುಗರ ಮನವನ್ನು ನಿಸ್ಸಂದೇಹವಾಗಿ ಸೂರೆಗೊಳ್ಳಬಲ್ಲುದು. ಎಲ್ಲಿಂದ ಬೇಕಾದರೂ ಈ ಕೃತಿಯನ್ನು ಓದಿ ಸುಖಿಸಬಹುದು.

ನಮ್ಮ ಹಿರಿಯ ತಲೆಮಾರಿನ ಲೇಖಕರನ್ನು ಇಂದಿನವರಿಗೆ ಪರಿಚಯಿಸುವ ಮೂಲಕ ಅವರ ಸಾಹಿತ್ಯ ಪ್ರವೇಶಕ್ಕೆ ಓದುಗರನ್ನು ಸೆಳೆದೊಯ್ಯಬಲ್ಲ ಇಂತಹ ಕೃತಿಗಳು ಸದಭಿರುಚಿಯ ಓದಿಗೆ ಕೀಲಿಕೈಯಾಗಬಲ್ಲವು. ಈ ಆಶಯವೇ ಇಂತಹ ಪುಸ್ತಕಗಳ ಪ್ರಕಟಣೆಯ ಹಿಂದಿನ ಒತ್ತಾಸೆಯಾಗಿದೆ.

View full details

Talk about your brand

Share information about your brand with your customers. Describe a product, make announcements, or welcome customers to your store.