Nadahalli Vasanth
ಮಕ್ಕಳಿಗೆ ವೈವಾಹಿಕ ಶಿಕ್ಷಣ
ಮಕ್ಕಳಿಗೆ ವೈವಾಹಿಕ ಶಿಕ್ಷಣ
Publisher -
- Free Shipping Above ₹250
- Cash on Delivery (COD) Available
Pages - 73
Type - Paperback
"ನಮ್ಮ ಕಾಲದಲ್ಲಿ ಇವೆಲ್ಲಾ ಎಲ್ಲಿತ್ತು. ನಾವೇನು ಚೆನ್ನಾಗಿ ಸಂಸಾರ ಮಾಡಿಕೊಂಡು ಬಂದಿಲ್ವಾ?: ಪ್ರಾಣಿ ಪಕ್ಷಿಗಳೆಲ್ಲಾ ಲೈಂಗಿಕ ಶಿಕ್ಷಣ ಪಡೆದುಕೊಂಡಿರುವುದಿಲ್ಲವಲ್ಲಾ!; ಇದನ್ನೆಲ್ಲಾ ಕಲಿಸಿದರೆ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಕೆಟ್ಟು ಕೆರ ಹಿಡಿದು ಹೋಗ್ತಾರೆ" ಈ ರೀತಿಯ ಸಾಕಷ್ಟು ತಗಾದೆ ತಕರಾರುಗಳಿವೆ.
ಅಂದಿನ ಸಾಮಾಜಿಕ ಸ್ಥಿತಿಗತಿಗಳೇ ಬೇರೆ ಇತ್ತಲ್ಲವೇ? ಹಿಂದಿನ ಕಾಲದಲ್ಲಿ ವೈಜ್ಞಾನಿಕ ಮಾಹಿತಿಗಳು ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ತಪ್ಪು ಮಾಹಿತಿಗಳು ಅತಿ ಕಡಿಮೆಯಾಗಿ ಪ್ರಸಾರವಾಗುತ್ತಿತ್ತು. ಸರೀಕರಿಂದ ಸಿಗುವ ಅತ್ಯಲ್ಪ ಮಾಹಿತಿಗಳಿಂದ ಹೇಗೋ ಜೀವನ ಸಾಗುತ್ತಿತ್ತು ಇಂದು ವಯಸ್ಸು ಮತ್ತು ಲಿಂಗ ಭೇಧವಿಲ್ಲದೆ ಎಲ್ಲ ಮಕ್ಕಳಿಗೂ ಪುಸ್ತಕ, ದೃಷ್ಯಮಾಧ್ಯಮ ಮತ್ತು ಅಂತರ್ಜಾಲದಲ್ಲಿ ಸಿಗುತ್ತಿರುವ ವಿಕೃತ ಮತ್ತು ವೈಭವೀಕೃತ ಮಾಹಿತಿಗಳು ನಿಜವಾಗಿಯೂ ಭಯಾನಕವಾಗಿವೆ. ಮುಗ್ಧ ಮಕ್ಕಳ ಮೇಲೆ ಇವು ಬೀರಬಹುದಾದ ದುಷ್ಪರಿಣಾಮಗಳನ್ನು ಸುತ್ತಲೂ ದಿನನಿತ್ಯ ನೋಡುತ್ತಲೇ ಇದ್ದೇವೆ. ನಮ್ಮ ಸರ್ಕಾರೀ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿರುವಾಗ ಪೋಷಕರೂ ಸುಮ್ಮನೆ ಕುಳಿತರೆ, ನಮ್ಮ ಮಕ್ಕಳಿಗೆ ವಿಚಾರಗಳನ್ನು ವೈಜ್ಞಾನಿಕವಾಗಿ ವಾಸ್ತವದ ನೆಲೆಯಲ್ಲಿ ತಿಳಿಸುವವರು ಯಾರು? ತಪ್ಪು ಮಾಹಿತಿಗಳಿಂದ ಅವರು ಅಡ್ಡದಾರಿ ಹಿಡಿದು ಅಸುಖಿಗಳಾದರೆ ಅದರಲ್ಲಿ ಪೋಷಕರ ಹೊಣೆಗಾರಿಕೆಯೂ ಇರುತ್ತದೆಯಲ್ಲವೇ? ಪೋಷಕರು ಎಲ್ಲಾ ವಿಚಾರಗಳನ್ನು ಮರೆಮಾಚಿದರೂ ಮಕ್ಕಳು ತಮ್ಮ ಕುತೂಹಲವನ್ನು ಬೇರೆಬೇರೆ ರೀತಿಯಲ್ಲಿ ತಣಿಸಿಕೊಳ್ಳುತ್ತಾರೆ. ಸ್ನೇಹಿತರು, ಮಾರುಕಟ್ಟೆಯಲ್ಲಿ ಕದ್ದುಮುಚ್ಚಿ ಮಾರಾಟವಾಗುವ ರೋಚಕ ಪುಸ್ತಕಗಳು, ಅಂತರ್ಜಾಲ ಮುಂತಾದವು ಮಕ್ಕಳ ಮಾಹಿತಿ ಕೇಂದ್ರಗಳಾಗುತ್ತವೆ. ವ್ಯಾಪಾರದ ಉದ್ದೇಶಗಳನ್ನು ಹೊಂದಿರುವ ಈ ಎಲ್ಲಾ ಮೂಲಗಳಲ್ಲಿ ವಿಕೃತ ಮತ್ತು ವೈಭವೀಕೃತ ಮಾಹಿತಿಗಳಿರುತ್ತವೆ. ಪೋಷಕರ ಮೌನ ಹಿಂಜರಿಕೆಗಳಿಂದಾಗಿ ಮಕ್ಕಳು ಇಂತಹ ಮಾಹಿತಿಗಳನ್ನೇ ಸತ್ಯವೆಂದು ನಂಬಿಕೊಂಡು ದಾರಿತಪ್ಪಿದರೆ ಇದಕ್ಕೆ ಯಾರು ಹೊಣೆಗಾರರು?
Share
Subscribe to our emails
Subscribe to our mailing list for insider news, product launches, and more.