Skip to product information
1 of 2

Kum. Veerabhadrappa

ಮಾಕನಡುಕು

ಮಾಕನಡುಕು

Publisher - ವಸಂತ ಪ್ರಕಾಶನ

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 344

Type - Paperback

'ಕನ್ನಡದ ಕಥನವಂತಿಕೆಯ ತ್ರಾಣವನ್ನು ಹೆಚ್ಚಿಸಿದ ಕಥೆಗಾರ ಕುಂವೀ. ಜನರ ಬದುಕಿನ ಉಸಿರ ವಿನ್ಯಾಸಗಳನ್ನು ಕನ್ನಡದ ಸಂವೇದನೆಗೆ ತಾಕಿಸಿದವರು. ತಮ್ಮ ಕಥನ ಕ್ರಮವನ್ನು ತಾವೆ ಬದಲಿಸಿಕೊಳ್ಳುತ್ತ ಬಂದವರು. ಮಾಕನಡುಕು ಇವರ ಹೊಸ ಕಾದಂಬರಿ. ಓಹ್ ಇದೊಂದು ನಿಬಿಡಾರಣ್ಯ. ಇದು ಕಥನವಲ್ಲ. ಕಥನದ ಮೂಲಕ ಬಾಳಿನ ತಾತ್ವಿಕತೆಯ ಶೋಧ. ಶೋಧನೆಯ ಹಾದಿಯುದ್ದ ಗಮ್ಮೆನ್ನುವ ಜೀವದಾಯಿ ಸತ್ಯ. ಈ ಮಾಕನಡುಕು ನಮ್ಮ ಪ್ರಜ್ಞೆಯ ಭಾಗವಾಗುತ್ತದೆ. ಈ ಕಥನ ಬಹುತ್ವದ ಚಹರೆಯನ್ನು ಶ್ರದ್ಧೆಯಿಂದ ರೂಪಿಸುತ್ತದೆ. ಸ್ವಾತಂತ್ರ್ಯಾನಂತರದ ನಮ್ಮ ಅಭಿವೃದ್ಧಿ ಮಾದರಿಗಳ ಸಾಕ್ಷ್ಯಚಿತ್ರವಾಗುತ್ತದೆ. ಬಂಡವಾಳೋದ್ಯಮವು ಮನುಷ್ಯ ಸಂವೇದನೆ ಮೇಲೆ ಸಾಧಿಸುವ ದಿಗ್ವಿಜಯವನ್ನು 'ಮಾಕನಡುಕು' ಕಾಣಿಸುತ್ತದೆ. ಹೀಗೆ ನಮ್ಮೊಳಗನ್ನು ಕಲಕುವ ಸಮಕಾಲೀನತೆಯ ಕಥನ ಮಾಕನಡುಕು ನಮ್ಮ ಸಂವೇದನೆಯ ಭಾಗವಾಗಿಬಿಡುತ್ತದೆ'

-ಡಾ. ವಿನಯಾ ಒಕ್ಕುಂದ (ಮುನ್ನುಡಿಯಿಂದ)
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)