Skip to product information
1 of 1

Dr. A. O. Avala Murthy

ಲಸಿಕೆಗಳ ತಯಾರಿಕೆ ಹೇಗೆ ?

ಲಸಿಕೆಗಳ ತಯಾರಿಕೆ ಹೇಗೆ ?

Publisher - ನವಕರ್ನಾಟಕ ಪ್ರಕಾಶನ

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 72

Type - Paperback

ಅಜ್ಜನ ಹೆಗಲ ಮೇಲೆ ಮೊಮ್ಮಗ

ಮಕ್ಕಳು ಮಾಡಲು ಸಾಧ್ಯವಿರುವ ಎಲ್ಲವನ್ನೂ ಅವರೊಂದಿಗಿದ್ದು, ಅವರಿಂದಲೇ ಮಾಡಿಸಬೇಕು. ಅವರ ಎಲ್ಲ ಉತ್ಸಾಹಕ್ಕೆ ನೀರೆರಚಿ ತಡೆಹಿಡಿದು ಅವರನ್ನು ನಿಷ್ಕ್ರಿಯರನ್ನಾಗಿಸುತ್ತಿದ್ದೇವೆಂಬ ಪ್ರಜ್ಞೆ ಮಾತ್ರ ಇಂದಿನ ಪೋಷಕರಲ್ಲಿಲ್ಲ. ಶಾಲೆಗೆ ಸೇರಿಸಿ, ಹಣ ಕಟ್ಟಿ ಶಿಕ್ಷಣ “ಕೊಡಿಸುವ" ಇಂದಿನ ವ್ಯವಸ್ಥೆ ಅಂಕಗಳಿಕೆಗೆ ಸೀಮಿತ, ಮಗುವಿನ ಸೃಜನಶೀಲತೆಗೆ ಬಿದ್ದ ಏಟು ಮುಂದೆ ಆತನನ್ನು ಪರಾವಲಂಬಿಯಾಗಿಸಬಹುದು, ಇಂದಿನ ಶಾಲಾ ಶಿಕ್ಷಣ ಪದ್ಧತಿ, ಸಿಲಬಸ್ ಸಂಸ್ಕೃತಿ, ಸುಲಭವಾಗಿ ಬದಲಾಯಿಸಲಾಗದ ಸ್ಥಿತಿ ತಲುಪಿದೆ. ಹುಲಿಯ ಬೆನ್ನೇರಿ ಇಳಿಯಲಾಗದ ಸ್ಥಿತಿಯಿದು, ಆಟದೊಂದಿಗೆ ಪಾಠದ ಪ್ರವೃತ್ತಿ ಕಣ್ಮರೆಯಾಗಿದೆ. ಇಂಥ ಸ್ಥಿತಿಯಲ್ಲಿ ಮಗುವನ್ನು ಒಲಿಸಿಕೊಂಡು ದಿನನಿತ್ಯದ ವ್ಯವಹಾರಗಳಲ್ಲೇ ಯಾವುದೇ ದುಬಾರಿ ಖರ್ಚಿಲ್ಲದೆ ಮಗುವಿಗೆ ಇಷ್ಟವಾದ ಆಟವೆಂಬಂತೆ ಪಾಠವನ್ನು ಕಲಿಸುವುದು ಹೇಗೆಂದು ಲೇಖಕರು ಚೆನ್ನಾಗಿ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಪೋಷಕರು ಓದಿಕೊಳ್ಳಿ, ಅನುಸರಿಸಿ,

ಡಾ| ಎ. ಓ. ಆವಲ ಮೂರ್ತಿ ಅವರು ಭೌತ ವಿಜ್ಞಾನದ ವಿಶ್ರಾಂತ ಪ್ರಾಧ್ಯಾಪಕರು, ಕಳೆದ ಕೆಲವು ವರ್ಷಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಏನು ಮಾಡಬೇಕು ಎಂಬುದನ್ನು ಕುರಿತು ಚಿಂತನೆ, ಅಧ್ಯಯನ, ಪ್ರಯೋಗಗಳು ಮತ್ತು ಬರವಣಿಗೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಲವು ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ. ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕುರಿತೇ ಸಂಶೋಧನ ಪ್ರಬಂಧವನ್ನು ಬರೆದು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೆ, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇಂದಿನ ಶಿಕ್ಷಣದಲ್ಲಿ ಇರುವ ಚಿಂತನಶೀಲತೆಯ ಕೊರತೆಯನ್ನು ಕಂಡುಕೊಂಡಿರುವ ಇವರು, ಮಕ್ಕಳಲ್ಲಿ ಚಿಂತನಶೀಲತೆಯನ್ನು ಮೈಗೂಡಿಸುವುದನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು, 'ಪುಟ್ಟ ಕಿಟ್ಟ ವಿಜ್ಞಾನ ಸಂವಾದ ಮಾಲೆ'ಯಡಿಯೂ ಹಲವು ಕಿರುಹೊತ್ತಗೆಗಳನ್ನು ರಚಿಸಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)