Title : Laingika Jataka, Novel, Writer : K. Satyanarayana, Publisher : Abhinava

ಲೈಂಗಿಕ ಜಾತಕ

Rs. 150.00
Skip to product information
Title : Laingika Jataka, Novel, Writer : K. Satyanarayana, Publisher : Abhinava
ಲೈಂಗಿಕ ಜಾತಕ
K. Satyanarayana
Publisher - ಅಭಿನವ ಪ್ರಕಾಶನ
Type - Paperback
Pages - 132
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.

Pickup available at Harivu Books New Shop

Usually ready in 24 hours

View store information

ಲೈಂಗಿಕ ಜಾತಕ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಕೆ. ಸತ್ಯನಾರಾಯಣರ 'ಲೈಂಗಿಕ ಜಾತಕ' ಹಲವು ಕಾರಣಗಳಿಗಾಗಿ ತುಂಬ ವಿಶಿಷ್ಟ ಕೃತಿ. ಸಲಿಂಗಿಗಳ ಸಮ್ಮೇಳನದ ಹಿನ್ನೆಲೆಯಲ್ಲಿ ಪ್ರಾರಂಭವಾಗುವ ಕಾದಂಬರಿ ನಮ್ಮ ಮುಂದೆ ನಮ್ಮದೇ ಆದ, ಆದರೂ ಒಪ್ಪಿಕೊಳ್ಳಲು ಹಿಂಜರಿಯುವ ಲೋಕವೊಂದನ್ನು ಅನಾವರಣಗೊಳಿಸುತ್ತದೆ. 'ಸಾವಿನ ದಶಾವತಾರ'ದಂಥಹ ಕಾಂಟ್ರೇರಿಯನ್ ಕಾದಂಬರಿ ಬರೆದ ಸತ್ಯನಾರಾಯಣ ಇನ್ನೂ ತುಂಬಾ ಮುಂದೆ ಹೋಗಿದ್ದಾರೆ. ಗಂಡು ಹೆಣ್ಣಿನ ಪರಿಧಿಯನ್ನು ಅಳಿಸಿಹಾಕಿ ವ್ಯಕ್ತಿ ವ್ಯಕ್ತಿಗಳ ಆಂತರಿಕ ವಹಿವಾಟು, ತುಮುಲಗಳು ಕಾದಂಬರಿಯ ಕೇಂದ್ರವಸ್ತುವಾಗಿಬಿಡುತ್ತವೆ. ಸಾಮಾಜಿಕವಾಗಿ ಲಿಂಗಭೇದವನ್ನು ಸಾಕಷ್ಟು ಅಳಿಸಿಹಾಕಿ ಗಂಡು-ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲೂ ಸಮಾನಮನಸ್ಕರಾಗಿರುವುದನ್ನು ಸಮಾಜ ಒಪ್ಪಿಕೊಂಡಿರುವಾಗ ತೀರ ವೈಯಕ್ತಿಕ ನೆಲೆಯಲ್ಲಿಯೂ ಈ ಭೇದವನ್ನು ಅಳಿಸುವ ಪ್ರಕ್ರಿಯೆ ಒಂದು ನಿರ್ಣಾಯಕ ಹಂತವನ್ನು ತಲುಪುವ ಸಾಧ್ಯತೆಯನ್ನು ಕಾದಂಬರಿ ಸೂಚಿಸುತ್ತದೆ. ಇಂಥ ಒಂದು ಹೊಚ್ಚಹೊಸ ಕಾದಂಬರಿ ನೀಡಿದ ಕೆ. ಸತ್ಯನಾರಾಯಣರು ನಿಜವಾಗಿ ಅಭಿನಂದನಾರ್ಹರು.

-ಪ್ರೊ. ಪ್ರಮೋದ್ ಮುತಾಲಿಕ್

ನಿಮ್ಮ ಕಾದಂಬರಿ 'ಲೈಂಗಿಕ ಜಾತಕ'ವನ್ನು ಕುತೂಹಲದಿಂದಲೂ, ಅಚ್ಚರಿಯಿಂದಲೂ ಓದಿದೆ. ಬಹಳ ಮೌಲಿಕ ಬರವಣಿಗೆ.

'ಸಾವಿನ ದಶಾವತಾರ', 'ವಿಚ್ಚೇದನಾ ಪರಿಣಯ' ಕಾದಂಬರಿಗಳಂತೆಯೇ ಇಲ್ಲಿಯೂ ನಿಮ್ಮ ವಸ್ತು ನಿರ್ವಹಣೆಯ ಕ್ರಮ ಹರಳುಗಟ್ಟಿದೆ. ನಿರೂಪಣಾ ವಿಧಾನವಂತೂ ನಿಮ್ಮದೇ ಎಂದು ಗುರುತು ಮಾಡಿಕೊಂಡಿದೆ. ಕಥೆ ಸಾಗುವ ಗತಿಯಲ್ಲಿನ ಸಾವಧಾನ, ಓದುಗನನ್ನು ನಿಲ್ಲಿಸಿ ನಿಲ್ಲಿಸಿ ಆಲೋಚನೆಗೆ ತೊಡಗುವಂತೆ ಮಾಡುವ ವಸ್ತು ನಿರ್ವಹಣಾ ಪರಿ ನಿಮ್ಮ ಕಾದಂಬರಿಗಳ ಸ್ಥಾಯಿ ಗುಣವಾದರೂ ಈ ಕಾದಂಬರಿಯಲ್ಲಿ ಅದರ ಹರವು ಹೆಚ್ಚು ವಿಸ್ತಾರವಾಗಿದೆ.

ಸಲಿಂಗ ಕಾಮವನ್ನು ಸದ್ಭಹಸ್ತ ಕಾಮದ ಹಲವು ಆಯಾಮಗಳೊಟ್ಟಿಗೆ ಶೋಧಿಸುವ ವಿಧಾನ ಕನ್ನಡದಲ್ಲಿ ಈ ವಸ್ತುವನ್ನು ಕೇಂದ್ರದಲ್ಲಿ ಇಟ್ಟುಕೊಂಡು ಬಂದ ಕಾದಂಬರಿಗಳ ಹಿನ್ನೆಲೆಯಲ್ಲಿ ಅಪೂರ್ವವೆನ್ನಿಸಿದೆ. ಮೊದಲಿಗೇ ನೀವು ನಿರ್ಮಿಸಿಕೊಳ್ಳುವ ಅಡಿಪಾಯ ತಾತ್ವಿಕ ಚರ್ಚೆಯೊಂದಕ್ಕೆ ಓದುಗನನ್ನು ಅಣಿಗೊಳಿಸುತ್ತದೆ. ಮುಂದುವರಿದಂತೆ ಹಲವು ಬದುಕುಗಳಿಗೆ ಮುಖಾಮುಖಿಯಾಗುವ ಕಾಮ; ಕಾಮುಕತೆಯಿಂದ ಬಿಡುಗಡೆ ಪಡೆದ ನೆಲೆಯಲ್ಲಿ ನಿಂತು ಓದುಗನನ್ನು ಎದುರುಗೊಳ್ಳುತ್ತದೆ. ಸಲಿಂಗರತಿಯ ರೋಚಕ ವ್ಯಾಖ್ಯಾನಗಳಿಂದ ದೂರನಿಂತು ಅದನ್ನು ಮನೋವೈಜ್ಞಾನಿಕ ಹಾಗೂ ಸಾಮಾಜಿಕ ನೆಲೆಗಳಿಂದ ನಿರ್ವಚಿಸುವುದರಿಂದ ಕೃತಿಗೆ ಹೊಸ ಆಯಾಮವೊಂದು ಲಭಿಸಿದಂತಾಗಿದೆ.

ನನಗೆ ನಿಮ್ಮ ಧೋರಣೆಯಲ್ಲಿ ಇಷ್ಟವಾಗುವುದು ದಡ ಸೇರುವ ಪ್ರವೃತ್ತಿಯಿಂದ ನಿಲ್ಲುವ ದೂರ ಮತ್ತು ಶಾಶ್ವತ ಅಶಾಶ್ವತಗಳ ಬಗ್ಗೆ ನೀವು ತಳೆದಿರುವ ನಿಲುವಿನಲ್ಲಿ, ವಸ್ತುವನ್ನು ಮುತ್ತು ರತ್ನಗಳ ಪರೀಕ್ಷಕನ ಹಾಗೆ ತನ್ಮಯರಾಗಿ ಪರಿಕಿಸುವ ಪರಿಯಲ್ಲಿ, ಆಪ್ತ ನಿರೂಪಣಾ ವಿಧಾನದಲ್ಲಿ, ಕಥಾ ಕೇಂದ್ರದ ನಿರ್ವಹಣೆಯಲ್ಲಿ, ಇದೆಲ್ಲ ನಿಮಗೇ ವಿಶಿಷ್ಟವಾದ ಸಾಧನೆ. ತೀರಾ ದೊಡ್ಡದಾದ ಸ್ಪೇಸ್ ಬಯಸದ ನಿಮ್ಮ ಕಾದಂಬರಿಗಳು ಇರುವ ಅವಕಾಶದಲ್ಲಿ ಬಂಧಿಯಾಗದೆ ವಿಸ್ತಾರ ಆಲೋಚನೆಗೆ ಎಡೆಮಾಡಿಕೊಡುತ್ತದೆ. ನಿಮಗೆ ಇದು ಬಹಳ ಫಲಕಾರಿಯಾದ ತಂತ್ರವಾಗಿ ಸಿಕ್ಕಿದೆ.

-ಆರ್. ವಿಜಯರಾಘವನ್

You may also like

Subscribe to our emails

Be the first to know about new collections and special offers.