Skip to product information
1 of 2

S. Chandrashekar, B. Surendra Rao

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಯ ಕೆಲವು ನೆಲೆಗಳು - ಸಂಪುಟ 9

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಯ ಕೆಲವು ನೆಲೆಗಳು - ಸಂಪುಟ 9

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 290

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಇತಿಹಾಸಕಾರರು ತಮ್ಮದೇ ಆದ ವಿಧಾನಗಳನ್ನು ಹೊಂದಿದ್ದಾರೆ. ಅದಕ್ಕನುಗುಣವಾಗಿ ನಾಡಿನ ಚರಿತ್ರೆಯನ್ನು ಕಟ್ಟುತ್ತಿದ್ದಾರೆ. ಹೀಗೆ ಕಟ್ಟುವ ಚರಿತ್ರೆ ಕೊನೆಗೂ ಒಂದು ಭಾಷಿಕ ನಿರೂಪಣೆ. ಹೀಗಿರುವಾಗ ಒಂದು ನಾಡಿಗೆ ಒಂದಕ್ಕಿಂತ ಹೆಚ್ಚು ಚರಿತ್ರೆಗಳು ಇರಬಹುದೇ? ಇರಲು ಸಾಧ್ಯ. ಏಕೆಂದರೆ ಚರಿತ್ರೆಯನ್ನು ಕಟ್ಟುವವರು ಯಾವ ನೆಲೆಯಲ್ಲಿ ನಿಂತಿದ್ದಾರೆ ಮತ್ತು ಏಕೆ ಆ ಚರಿತ್ರೆಯನ್ನು ಕಟ್ಟುತ್ತಿದ್ದಾರೆ ಎಂಬುದನ್ನು ಅವಲಂಬಿಸಿ ಬೇರೆ ಬೇರೆ ಚರಿತ್ರೆಗಳು ಮೈದಳೆಯಬಹುದು. ಈ ನಾಡನ್ನು ಆಳಿದ, ಇಲ್ಲಿ ಯುದ್ಧಗಳನ್ನು ಮಾಡಿದ, ತಮ್ಮ ಆಳ್ವಿಕೆಯ ಫಲಿತವಾಗಿ ಇಲ್ಲಿನ ಸಾಂಸ್ಕೃತಿಕ ರಚನೆಗಳನ್ನು ರೂಪಿಸಿದ ರಾಜರುಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಕಟ್ಟಿದ ಚರಿತ್ರೆಗಳು ಇವೆ. ಆದರೆ ಇಲ್ಲಿನ ಜನರು ಬದುಕಿದ ಬಗೆ, ಆ ಬದುಕನ್ನು ರೂಪಿಸಿದ ಸಮಾಜದ ಸ್ವರೂಪ ಮುಂತಾದವುಗಳನ್ನು ಇರಿಸಿಕೊಂಡು ಕನ್ನಡ ನಾಡಿನ ಚರಿತ್ರೆಯನ್ನು ಕಟ್ಟುವ ಯತ್ನಗಳು ನಡೆದಿರುವುದು ಕಡಿಮೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಈ ಬಗೆಯ ಚರಿತ್ರೆಯನ್ನು ಕಟ್ಟುವ ಯೋಜನೆಯೊಂದನ್ನು ರೂಪಿಸಿ ದಿಟವಾಗಿಸಿದೆ.

— ಕೆ. ವಿ. ನಾರಾಯಣ

View full details