Skip to product information
1 of 2

Sathyakama

ಕಪಿಲ ವಸ್ತು

ಕಪಿಲ ವಸ್ತು

Publisher - ಅಂಕಿತ ಪುಸ್ತಕ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 112

Type - Paperback

Gift Wrap
Gift Wrap Rs. 15.00

ಇಲ್ಲಿ ಇನ್ನೂ ಹಲವು ಮಾತು ಹೇಳುವುದಿದೆ. ಜನಕ್ಕೆ ಗೊತ್ತಿದ್ದ ಮಾತು ಹೇಳಿದರೆ ಇದೇನು ಮಹಾ ಎನ್ನುತ್ತಾರೆ. ಗೊತ್ತಿಲ್ಲದ್ದನ್ನು ದೂರದ್ದನ್ನು ಹೇಳಿದರೆ, ಅದು ಹೇಗೆ? ಶುದ್ಧ ಬುರುಡೆ ಎನ್ನುತ್ತಾರೆ. ಇದು ಜನಕ್ಕೆ ಹೇಳಬೇಕೆನ್ನುವವನ ಗೋಳಾಟ. ನನಗೆ ತೋಚಿದ್ದು ನನಗಾಗಿಯೇ ಕಾಣಿಸಿದೆ. ನನ್ನಲ್ಲಿ ಏನೂ ಇಲ್ಲ ಎನ್ನುವುದು ನನ್ನ ಅನಿಸಿಕೆ. ಇರುವುದೆಲ್ಲ ನನ್ನಲ್ಲಿಯೇ ಇದೆ ಎನ್ನುವುದೂ ನಿಜ. ನಾನು ಬೆಳೆಯಲಿದ್ದೇನೆ. ಅದಕ್ಕಾಗಿಯೆ ಈ ನೂರು ಹಾದಿ ನಡೆದೆ. ಶತಪಥದಲ್ಲಿ ನನ್ನ ಸಾವಿರ ಹೆಜ್ಜೆಗಳು ಮೂಡಿವೆ. ಹಿಡಿದ ಹಾದಿಯನ್ನು ಹಿಡಿಯಲಿಲ್ಲ. ಯಾವ ಹಾದಿಯಲ್ಲೂ ಏನನ್ನಾದರೂ ಪಡೆಯದೆ ಮರಳಿ ಬರಲಿಲ್ಲ. ಒಂದು ಹಾದಿಯ ಮುಂದೆ ಇನ್ನೊಂದು. ನನ್ನ ಶತಪಥ ಆರಣ್ಯಕವೂ ಆಗಿದೆ-ಬ್ರಾಹ್ಮಣ್ಯವೂ ಆಗಿದೆ.

ಶತಪಥ ವಿಸ್ತಾರ ಅನಂತವಿದೆ. ಆದ್ದರಿಂದ ಪಥಿಕನಾದ ಕಪಿಲನಿಗೆ ಪಥ ಮುಗಿಯುವವರೆಗೆ ಪಂಥವಿದೆ. ಓಟ ನಿಲ್ಲದು. ಅಲ್ಲಿಯವರೆಗೆ ಅಲ್ಪವಿರಾಮ ಅರ್ಧವಿರಾಮ ಕೂಡ ಇಲ್ಲ ! ಪೂರ್ಣವಿರಾಮವೆಲ್ಲಿಯದು?

ಕಾಲವನ್ನು ದಾಟಿ, ದೇಶವನ್ನು ಮೀರಿ ಕಪಿಲ ವಸ್ತುವಿನ ವಿಸ್ತಾರವಿದೆ. ಕಣ್ಣಿಗೆ, ನಾಲಗೆಗೆ, ಮನಕ್ಕೆ, ಮಾತಿಗೆ ಅದು ತಾಗದು. ನನ್ನ ಬಗ್ಗೆ ಸಿಕ್ಕವರು ಏನೂ ಹೇಳಲಿ, ಆದರೆ ಕಂಡವರಾರು? ಅನಂತ ವಿಸ್ತಾರವಿದ್ದ ಕಪಿಲ ವಸ್ತು ಚೋಟುದ್ದ ಅಳತೆ. ಇದು ಇನ್ನೂ ನೂರು ಮಾರು-! ಅದು ಬೇಕಿದ್ದರೆ ಎದೆ ಬೇಕು.

View full details