Dr. Doddamallayya
ಕಂಡುಂಡ ಕಥೆಗಳು
ಕಂಡುಂಡ ಕಥೆಗಳು
Publisher -
- Free Shipping Above ₹400
- Cash on Delivery (COD) Available*
Pages - 230
Type - Paperback
Couldn't load pickup availability
.
ಪಶುವೈದ್ಯಕೀಯ ಹಾಗೂ ಸಾಹಿತ್ಯಾನುಸಂಧಾನ
ಕಥೆಗಾರ ಡಾ.ದೊಡ್ಡಮಲ್ಲಯ್ಯ ಅವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದವರಷ್ಟೇ ಅಲ್ಲಾ, ಪಶುವೈದ್ಯಾಧಿಕಾರಿಗಳಾಗಿ ಬಹುಪಾಲು ಹಳ್ಳಿಗಳಲ್ಲೇ ದುಡಿದವರು. ಹಳ್ಳಿಯ ವಾತಾವರಣ ಸೊಗಡು ಸೊಬಗು, ಅಲ್ಲಿನ ಜನರ ಒಡನಾಟ, ಮುಗ್ಧತೆ, ಬಡತನ, ಶ್ರಮ ಜೀವನವನ್ನು ಹತ್ತಿರದಿಂದ ಬಲ್ಲವರಾದ ಕಾರಣ, ಶ್ರೀಯುತರ ಬರಹಗಳಲ್ಲಿ ಗ್ರಾಮೀಣ ನೈಜತೆ, ಭಾಷಾವೈವಿದ್ಯತೆ ಪರಕಾಯ ಪ್ರವೇಶ ಮಾಡಿದಂತೆ ಭಾಸವಾಗುತ್ತದೆ. ಪಶುವೈದ್ಯರಾದ್ದರಿಂದಲೋ ಏನೋ ಸಾಕು ಪ್ರಾಣಿಗಳ ಗುಣ ಸ್ವಭಾವ ವೈರುಧ್ಯಗಳನ್ನು ಬಲ್ಲವರಾದ್ದರಿಂದ ನಾಯಿ, ನರಿ, ಹೋರಿ, ಹಸು, ಎಮ್ಮೆಗಳನ್ನೂ ಪಾತ್ರವಾಗಿಸಿಕೊಂಡು ಲೀಲಾಜಾಲವಾಗಿ ಕಥೆ ಬರೆಯಬಲ್ಲ ವಿಶೇಷತೆ ಸಿದ್ದಿಸಿದಂತಿದೆ. ಇವರು ಬರೆದ ಹದಿನೆಂಟು ಬರಹಗಳನ್ನು ಕಥೆಗಳೆಂದೇ ಭಾವಿಸಿ ದೊಡ್ಡಮಲ್ಲಯ್ಯ ಹೆಣೆದಿದ್ದಾದರೂ ಹಲವು ಅಪ್ಪಟ ಪ್ರಬಂಧಗಳಂತೆಯೂ ಕೆಲವು ವೃತ್ತಿಜೀವನದ ದಾಖಲೆಗಳಂತೆಯೂ ಸಹ ಓದುಗರನ್ನು ಸೆಳೆಯಬಲ್ಲವು. ಪಶುಪಾಲನಾ ವೃತ್ತಿ ಕೃಷಿ ಪ್ರಧಾನ ಜೀವನವೇ ಶ್ರೀಯುತರ ಅನುಭವ ಹಾಗೂ ಅನುಭಾವದ ಸಾರವಾಗಿ ಕಥೆಗಳಾಗಲು ಯತ್ನಿಸಿವೆ. ಯಶಸ್ವಿಯೂ ಆಗಿವೆ. ಮೊದಲ ಪ್ರಯತ್ನವಾದ್ದರಿಂದ ಲೇಖಕರಿಗೆ ರಿಯಾತಿಯೂ ಉಂಟಲ್ಲವೇ
-ಡಾ. ಬಿ.ಎಲ್. ವೇಣು
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.