Skip to product information
1 of 2

V. K. gokak

ಕಲೆಯ ನೆಲೆ

ಕಲೆಯ ನೆಲೆ

Publisher - ಅಭಿನವ ಪ್ರಕಾಶನ

Regular price Rs. 75.00
Regular price Rs. 75.00 Sale price Rs. 75.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 80

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಮಾನವಕುಲದ ಜೀವಿತದಲ್ಲಿ ಕಲೆಯ ಸ್ಥಾನವೇನು? ಕಲೆಯ ಉಗಮವೆಲ್ಲಿ? ಯಾವ ಧೈಯ-ಚೇತನಗಳ ಸುಳಿವನ್ನು ಹಿಡಿದು ಕಲೆಯ ಪ್ರಾದುರ್ಭಾವವು ಸಾಗಿದೆ? ಅದರ ವಿವಿಧ ರೂಪಗಳನ್ನು ಹೇಗೆ ವರ್ಣಿಸಬಹುದು? ಈ ಪ್ರಶ್ನೆಗಳು ಕಲೋಪಾಸಕರನ್ನೂ ರಸಿಕರನ್ನೂ ಒಮ್ಮಿಲ್ಲೊಮ್ಮೆ ಕೆಣಕದೆ ಇಲ್ಲ.

ಕಲೆಯ ಅವತಾರಗಳು ವಿವಿಧವಾಗಿರುವಂತೆ ಅದನ್ನು ಕಾಣುವ ಕಣ್ಣುಗಳು ಸಹ ಬೇರೆ ಬೇರೆ ದೃಷ್ಟಿಕೋನದಿಂದ ದೃಷ್ಟಿಯನ್ನು ಹರಿಬಿಡುತ್ತವೆ. ಸಮಾಜಶಾಸ್ತ್ರಜ್ಞನು ಕಲೆಯ ಉಗಮವನ್ನು ಮಾನವನ ಸಾಮಾಜಿಕ ಜೀವನದ ವಿಕಾಸದಲ್ಲಿ ಕಾಣುತ್ತಾನೆ. ಸಮಾಜಕ್ಕಾಗಿ ಕಲೆಯು ಒದಗಿಸುವ ಕಲ್ಯಾಣವೂ ಪರಿವರ್ತನಾ ಶಕ್ತಿಯೂ ಬಹ್ವಂಶದಲ್ಲಿ ಅವನ ಕಣ್ಣೆದುರು ಕಟ್ಟಿರುತ್ತವೆ. ಮಾನಸಶಾಸ್ತ್ರಜ್ಞನು ಕಲೆಯ ಉಗಮವನ್ನು ಮಾನವನ ಮನಸ್ಸಿನಲ್ಲಿ ಕಂಡುಹಿಡಿಯುತ್ತಾನೆ. ಮನಸ್ಸಿನ ಸೂಕ್ಷ್ಮ ಚಲನವಲನಗಳ ಅಭಿವ್ಯಕ್ತಿಯೇ ಕಲೆಯೆಂದು ಅವನು ಅದನ್ನು ಅಳೆಯತೊಡಗುತ್ತಾನೆ. ಒಂದು ಮನಸ್ಸಿನಲ್ಲಿ ಉಗಮಿಸಿ ಇನ್ನೊಂದು ಮನಸ್ಸನ್ನು ತುಂಬುವುದು,Articles, Non Fiction ಹಿಗ್ಗಿಸುವುದು ಇಲ್ಲವೆ ಪರಿವರ್ತಿಸುವುದೇ ಅವನ ದೃಷ್ಟಿಯಲ್ಲಿ ಕಲೆಯ ಸಫಲತೆಯಾಗಿದೆ. ಐತಿಹಾಸಿಕರು, ತಾತ್ವಿಕರು, ತಾರ್ಕಿಕರು, ರಾಜಕಾರಣಿಗಳು- ಇವರೆಲ್ಲರೂ ತಮ್ಮ ತಮ್ಮ ದೃಷ್ಟಿಯಿಂದ ಕಲೆಯ ಒಂದೊಂದು ಪರಿಯನ್ನು ಕಂಡುಹಿಡಿಯುತ್ತಾರೆ; ಒಮ್ಮೊಮ್ಮೆ ಅದೇ ಕಲೆಯ ಸರ್ವಸ್ವವೆಂದು ಸಾರುತ್ತಾರೆ.

ಕಲೆಯನ್ನು ಕುರಿತು ಮಾಡಿದ ಇವರೆಲ್ಲರ ವರ್ಣನೆಗಳಲ್ಲಿ ಸತ್ಯಾಂಶವು ಇದ್ದೇ ಇರುತ್ತದೆ. ಆದರೆ ಈ ಯಾವ ಒಂದು ದೃಷ್ಟಿಯಲ್ಲಿಯೇ ಸಕಲ ಸತ್ಯವು ಅಡಗಿರುವುದಿಲ್ಲ. ಕಲೆಯ ಸ್ವರೂಪವನ್ನು ನಿರ್ವಿಕಾರವಾಗಿ ತಿಳಿಯಲಪೇಕ್ಷಿಸುವ ಜಿಜ್ಞಾಸುವಿಗೆ ಈ ಎಲ್ಲ ವರ್ಣನೆಗಳು ಒಂದು ರೀತಿಯಿಂದ ಅವಶ್ಯವಾಗಿವೆ. ಅವುಗಳನ್ನು ಯೋಗ್ಯವಾಗಿ ತೂಗಿ, ಹೋಲಿಸಿ, ಸಮನ್ವಯಿಸಿ ನೋಡಿದಲ್ಲಿ ಕಲೆಯ ಸತ್ಯರೂಪವು ಹೊಳೆಯುವುದರಲ್ಲಿ ಸಂಶಯವಿಲ್ಲ.

(ಒಳಗಿನ ಪುಟಗಳಿದ)

View full details